ಮದುವೆ ಹೊತ್ತಲ್ಲೇ ವರ ನಾಪತ್ತೆ: ಮೆಹಂದಿ ಶಾಸ್ತ್ರ ಕ್ಯಾನ್ಸಲ್

ಮಂಗಳೂರು: ಮದುವೆಗೆ ಮೊದಲು ಮೆಹಂದಿ ಶಾಸ್ತ್ರದ ದಿನ ವರ ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಸಮೀಪದ ಕೊಣಾಜೆಯಲ್ಲಿ ನಡೆದಿದೆ.

ಕಿಶನ್ ಶೆಟ್ಟಿ ನಾಪತ್ತೆಯಾದ ವರ. ಜೂನ್ 1 ರಂದು ತೌಡುಗೋಳಿ ವರ್ಕಾಡಿ ದೇವಂದಪ್ಪಡುವಿನ ಕಿಶನ್ ಶೆಟ್ಟಿ ಮದುವೆ ನಿಗದಿಯಾಗಿತ್ತು. ಜಪ್ಪಿನಮೊಗರು ಯುವತಿಯೊಂದಿಗೆ ಮದುವೆ ನಿಗದಿಯಾಗಿದ್ದು, ವಧುವಿನ ಮನೆಯಲ್ಲಿ ಅದ್ದೂರಿ ಮೆಹಂದಿ ಶಾಸ್ತ್ರ ನೆರವೇರಿತ್ತು.

ವರನ ಮನೆಯಲ್ಲಿ ಮಂಗಳವಾರ ಮೆಹಂದಿ ಶಾಸ್ತ್ರ ನಿಗದಿಯಾಗಿತ್ತು. ಆದರೆ, ವರ ನಾಪತ್ತೆಯಾಗಿದ್ದರಿಂದ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಮಂಗಳವಾರ ಸಂಜೆ ಮೆಹಂದಿ ಶಾಸ್ತ್ರ ಕಾರ್ಯಕ್ರಮ ನಿಗದಿಯಾಗಿದ್ದು, ಹಣ್ಣು ತರಲು ಮನೆಯಿಂದ ತೊಕ್ಕೊಟ್ಟಿಗೆ ಹೋಗಿದ್ದ ಕಿಶನ್ ನಂತರ ತಂದೆಗೆ ಫೋನ್ ಮಾಡಿ ಮತ್ತೇನಾದರೂ ತರಬೇಕಿದೆಯೇ ಎಂದು ಕೇಳಿದ್ದಾರೆ. ಆ ನಂತರ ಮನೆಗೆ ಬಾರದೆ ಅವರು ನಾಪತ್ತೆಯಾಗಿದ್ದು, ಕಿಶನ್ ಶೆಟ್ಟಿಗೆ ಬೇರೆ ಯುವತಿಯೊಂದಿಗೆ ಪ್ರೀತಿ ಇದ್ದು, ಈ ಕಾರಣದಿಂದ ನಾಪತ್ತೆಯಾಗಿರಬಹುದು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read