
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಕ್ಕಳು ಪ್ಲೇಸ್ಟೇಷನ್ ಮತ್ತು ವಿಡಿಯೋ ಗೇಮ್‌ಗಳಿಗೆ ವ್ಯಸನಿಯಾಗಿದ್ದರೂ, ಯಾವಾಗಲೂ ಮನೆಯಿಂದ ಹೊರಗೆ ಹೋಗಿ ಕೆಲವು ಹೊರಾಂಗಣ ಆಟಗಳನ್ನು ಆಡುವುದು ಒಳ್ಳೆಯದು. ತಮ್ಮ ಮಕ್ಕಳಿಗೆ ಹೊರಾಂಗಣ ಆಟವನ್ನು ಕಲಿಸಲು ತಂದೆಯೊಬ್ಬರು ಆಕರ್ಷಕ ಆಟಿಕೆ ತಯಾರು ಮಾಡಿದ್ದು ಅದೀಗ ವೈರಲ್ ಆಗಿದೆ.
‘ಹೌ ಥಿಂಗ್ಸ್ ವರ್ಕ್’ ಹೆಸರಿನ ಪುಟದಲ್ಲಿ ಇದನ್ನು ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ತಂದೆಯೊಬ್ಬರು “ಕ್ರಿಯಾತ್ಮಕ ಐರನ್ ಮ್ಯಾನ್ ಸೂಟ್” ರಚಿಸಿರುವುದನ್ನು ನೋಡಬಹುದು. ಅವರು ತಮ್ಮ ಹಿತ್ತಲಿನಲ್ಲಿ ಸೂಟ್ ಅನ್ನು ತಯಾರಿಸಿದ್ದಾರೆ.
ವೀಡಿಯೊದಲ್ಲಿ, ಈ ಅಪ್ಪ ತಮ್ಮ ಬೆನ್ನಿನ ಮೇಲೆ ಸೂಟ್ ಧರಿಸಿರುವುದನ್ನು ಕಾಣಬಹುದು. ನಂತರ ಅವರು ಆಕಾಶಕ್ಕೆ ಹಾರುತ್ತಾರೆ. ಹಲವು ಕಡೆ ಗಾಳಿಯಲ್ಲಿ ಸಂಚರಿಸುತ್ತಾರೆ. ಕೈಯಲ್ಲಿರುವ ಮಷಿನ್ ಸಹಾಯದಿಂದ ದಿಕ್ಕನ್ನು ಬದಲಾಯಿಸುತ್ತಾರೆ. “ಈ ತಂದೆ ತಮ್ಮ ಹಿತ್ತಲಿನಲ್ಲಿ ಕ್ರಿಯಾತ್ಮಕ ಐರನ್ ಮ್ಯಾನ್ ಸೂಟ್ ಅನ್ನು ನಿರ್ಮಿಸಿದ್ದು, ಸಾರ್ವಜನಿಕವಾಗಿ ಅವರ ಮೊದಲ ಪ್ರದರ್ಶನವಾಗಿದೆ” ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ತಮಗೂ ಈ ಸೂಟ್ ನೀಡುವಂತೆ ಹಲವಾರು ಕಮೆಂಟ್ಗಳು ಬರುತ್ತಿವೆ.