ಬಾವಿಗೆ ಬಿದ್ದಿದ್ದ ಚಿರತೆಯನ್ನು ರಕ್ಷಿಸಲು ಪಶುವೈದ್ಯೆ ಸ್ವತಃ ತಾವೇ ಬಾವಿಗೆ ಇಳಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ನಿಡ್ಡೋಡಿ ಗ್ರಾಮದಲ್ಲಿ ನಡೆದಿದೆ. ಪಶುವೈದ್ಯೆ ಡಾ. ಮೇಘನಾ ಇಂತಹದೊಂದು ಸಾಹಸ ಮಾಡಿದವರಾಗಿದ್ದಾರೆ.
ಶನಿವಾರದಂದು ಗ್ರಾಮದ ಬಾವಿಯೊಳಗೆ ಚಿರತೆಯೊಂದು ಬಿದ್ದಿದ್ದು, ಅದನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಲಾಗಿತ್ತು. ಬೋನು ಇಳಿಬಿಟ್ಟರೂ ಸಹ ತಳಭಾಗದಲ್ಲಿ ಅಡಗಿಕೊಂಡಿದ್ದ ಚಿರತೆ ಅದರೊಳಗೆ ಪ್ರವೇಶಿಸಿರಲಿಲ್ಲ.
ಅದಕ್ಕೆ ಅರಿವಳಿಕೆ ಮದ್ದು ನೀಡಬೇಕೆಂದರೆ ಬಾವಿ ತುಂಬಾ ಆಳವಾಗಿತ್ತು. ಹೀಗಾಗಿ ಪಶುವೈದ್ಯೆ ಮೇಘನಾ ಬೋನಿನ ಮೂಲಕ ಬಾವಿಗೆ ಇಳಿದಿದ್ದು, ಅರಿವಳಿಕೆ ಮದ್ದು ನೀಡಿದ್ದಾರೆ. ಬಳಿಕ ಚಿರತೆಯನ್ನು ಬೋನಿನೊಳಗೆ ಹಾಕಿಕೊಂಡಿದ್ದು, ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹಗ್ಗದ ಮೂಲಕ ಬೋನನ್ನು ಮೇಲೆ ಎಳೆದುಕೊಂಡಿದ್ದಾರೆ. ನಂತರ ಚಿರತೆಯನ್ನು ಕಾಡಿಗೆ ಬಿಡಲಾಗಿದೆ.