
ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ವಿಸಿ ನಾಲೆಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ಕಾಳೇನಹಳ್ಳಿ ಬಳಿ ನಡೆದಿದೆ.
ಕಳೇನಹಳ್ಳಿ ಬಳಿಯ ವಿಸಿ ನಾಲೆಗೆ ಟ್ರ್ಯಾಕ್ಟರ್ ಬಿದ್ದಿದೆ. ಸ್ಥಳದಲ್ಲೇ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕಾಳೇನಹಳ್ಳಿ ಗ್ರಾಮದ ನಿವಾಸಿ ನವೀನ್ ಮೃತ ದುರ್ದೈವಿ.
ಘಟನಾ ಸ್ಥಳಕ್ಕೆ ಪೊಲಿಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.