alex Certify Shocking Video: ರೇಲಿಂಗ್​ ಮೇಲಿನಿಂದ ಮೆಟ್ಟಿಲು ಇಳಿಯುವ ಸಾಹಸ; ಪವಾಡಸದೃಶ್ಯ ರೀತಿಯಲ್ಲಿ ಜೀವಾಪಾಯದಿಂದ ಪಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking Video: ರೇಲಿಂಗ್​ ಮೇಲಿನಿಂದ ಮೆಟ್ಟಿಲು ಇಳಿಯುವ ಸಾಹಸ; ಪವಾಡಸದೃಶ್ಯ ರೀತಿಯಲ್ಲಿ ಜೀವಾಪಾಯದಿಂದ ಪಾರು

ಕೆಲವರಿಗೆ ಹುಚ್ಚು ಸಾಹಸ ಮಾಡುವುದು ಎಂದರೆ ಪ್ರೀತಿ. ಕೆಲವೊಮ್ಮೆ ಅದು ಜೀವಕ್ಕೂ ಅಪಾಯ ಉಂಟು ಮಾಡಬಹುದು. ಅಂಥದ್ದೇ ವಿಡಿಯೋ ಒಂದು ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ, ಚೆನ್ನಾಗಿರುವ ಮೆಟ್ಟಿಲುಗಳು ಇದ್ದರೂ ರೇಲಿಂಗ್‌ ಮೇಲೆ ಹತ್ತಿಕೊಂಡು ಮೆಟ್ಟಿಲುಗಳಿಂದ ಜಾರಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ.

ಈ ರೀತಿಯ ಸರ್ಕಸ್​ ಆತನ ಪ್ರಾಣಕ್ಕೆ ಕುತ್ತಾಗುವ ಸಾಧ್ಯತೆ ಇತ್ತು. ಅವನು ಸಮತೋಲನವನ್ನು ಕಾಯ್ದುಕೊಳ್ಳಲು ಸಾಧ್ಯವಾಗದೆ ರೇಲಿಂಗ್ ಮೇಲಿನಿಂದ ಉರುಳಿ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವ್ಯಕ್ತಿಯ ಜೀವಕ್ಕೆ ಅಪಾಯವಾಗದಿದ್ದರೂ ಅವರು ತುಂಬಾ ಗಾಯಗೊಂಡಿದ್ದಾರೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇಂಥ ಸರ್ಕಸ್​ ಏಕೆ ಮಾಡಬೇಕು ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

https://twitter.com/ViciousVideos/status/1621569455934558208?ref_src=twsrc%5Etfw%7Ctwcamp%5Etweetembed%7Ctwterm%5E1

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...