ಬೆಂಗಳೂರು: ಬೆಂಗಳೂರನ್ನು ಭಾರತದ ಟೆಕ್ ಸಿಟಿ ಎಂದು ಕರೆಯುತ್ತಾರೆ. ಏಕೆಂದರೆ ನವೀನ ವಾಹನಗಳು ಮತ್ತು ಪರಿಕಲ್ಪನೆಗಳು ಇಲ್ಲಿಯ ಬೀದಿಗಳಲ್ಲಿ ಪ್ರತಿದಿನ ನೋಡಲು ಸಿಗುತ್ತವೆ. ಕೆಲವೊಮ್ಮೆ ಕುತೂಹಲ ಎನಿಸುವ ವಾಹನಗಳು ಕಾಣುವುದುಂಟು. ಇನ್ನು ಕೆಲವರಿಗೆ ವಾಹನ ಖರೀದಿಸಿ ಅದನ್ನು ಇನ್ನೊಂದು ರೀತಿಯಲ್ಲಿ ಪರಿವರ್ತಿಸುತ್ತಾರೆ. ಅಂಥದ್ದೇ ಒಂದು ವಾಹನವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರಿನ ರಸ್ತೆಯಲ್ಲಿ ವಿಶಿಷ್ಟ ವಾಹನವೊಂದನ್ನು ಓಡಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ. ರೇವಂತ್ ಎಂಬ ಬಳಕೆದಾರರು ಇದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಾರಿನ ವಿಡಿಯೋ ಮತ್ತು ಚಿತ್ರಗಳನ್ನು ನೋಡಿ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ. ಇದೀಗ ಭಾರಿ ಚರ್ಚೆಯ ವಿಷಯವಾಗಿದೆ.
ಇಲ್ಲಿ ಶೇರ್ ಮಾಡಲಾದ ವಾಹನವನ್ನು ವೆಲೋಮೊಬೈಲ್ ಎಂದು ಕರೆಯಲಾಗುತ್ತದೆ. ವಾಹನವು ಫಣೀಶ್ ನಾಗರಾಜ ಅವರಿಗೆ ಸೇರಿದ್ದು ಎಂದು ಹೇಳಲಾಗಿದೆ. “ಇದು ಮಾನವ ಚಾಲಿತ ಟ್ರೈಕ್ ಆಗಿದೆ. ಸಾಮಾನ್ಯ ಬೈಸಿಕಲ್‌ನಂತೆಯೇ ಇರುತ್ತವೆ” ಎಂದು ನಾಗರಾಜ ಟ್ವೀಟ್‌ಗೆ ನೀಡಿದ ಉತ್ತರದಲ್ಲಿ ವಿವರಿಸಿದ್ದಾರೆ.
https://twitter.com/RevanthD18/status/1617032025487323138?ref_src=twsrc%5Etfw%7Ctwcamp%5Etweetembed%7Ctwterm%5E1617032025487323138%7Ctwgr%5E13cbc82e52bef722ec7193be45d04faf950ee177%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-spots-imported-human-powered-car-in-bengalurus-jp-nagar-heres-the-story-behind-it-2325280-2023-01-23