ಇಂದೋರ್ (ಮಧ್ಯಪ್ರದೇಶ): ಆಘಾತಕಾರಿ ಘಟನೆಯೊಂದರಲ್ಲಿ, ಪುತ್ರನೊಬ್ಬ ತನ್ನ ವೃದ್ಧ ತಾಯಿಗೆ ಕಪಾಳಮೋಕ್ಷ ಮಾಡಿ ಒದ್ದಿರುವ ಘಟನೆ ಚಂದರ್ ನಗರ ಪ್ರದೇಶದಲ್ಲಿ ನಡೆದಿದೆ. ಜೂನ್ 15 ರಂದು ಈ ಘಟನೆ ವರದಿಯಾಗಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಇಂದೋರ್‌ನ ಚಂದನ್ ನಗರದಲ್ಲಿ ಸುರೇಶ್ ವರ್ಮಾ ಎಂಬ ವ್ಯಕ್ತಿ ತನ್ನ ವಯಸ್ಸಾದ ತಾಯಿಗೆ ಕಪಾಳಮೋಕ್ಷ ಮಾಡಿದ ಘಟನೆ ವರದಿಯಾಗಿದೆ. ಬಳಿಕ ಆಕೆಯನ್ನು ನಿಯಂತ್ರಿಸಲು ಮುಂದಾದಾಗ ಹೊಟ್ಟೆಗೆ ಒದ್ದಿದ್ದಾನೆ.
ಘಟನೆಯ ವೀಡಿಯೋ ಅಂತರ್ಜಾಲದಲ್ಲಿ ವೈರಲ್ ಆದ ನಂತರ, ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡರು, ಆದರೆ ತಾಯಿ ನಿರಾಕರಿಸಿದರು.
इंदौर के चंदन नगर में सुरेश वर्मा अपनी बुज़ुर्ग मां को थप्पड़ मारता है, मां खुद को संभालती है इसके पहले ही सुरेश मां के पेट मे लात मारता है..
वीडियो वायरल हुआ तो पुलिस ने कार्रवाई करने को कहा तो माँ ने मना कर दिया, घटना बीती पन्द्रह जून की है pic.twitter.com/dX5xQyiSqu— Kavish Aziz (@azizkavish) June 21, 2023