ಕೆಲಸ ಮಾಡಲು ವಿಳಂಬ: ಉದ್ಯೋಗಿ – ಬಾಸ್​ ಹಾಸ್ಯದ ಸಂಭಾಷಣೆ ವೈರಲ್​

ನವದೆಹಲಿ: ನಾವು ಕೆಲಸಕ್ಕೆ ಏಕೆ ತಡವಾಗಿ ಹೋಗುತ್ತೇವೆ ಅಥವಾ ಒಂದು ದಿನ ರಜೆ ತೆಗೆದುಕೊಳ್ಳಲು ಏನೆಲ್ಲಾ ಕಾರಣಗಳನ್ನು ನೀಡುತ್ತೇವೆ ಎನ್ನುವುದು ಬಹುತೇಕ ಎಲ್ಲರಿಗೂ ತಿಳಿದ ವಿಷಯವೇ. ಆದರೆ ಇದಕ್ಕೆ ನೀಡುವ ಕಾರಣಗಳು ಮಾತ್ರ ಥರಹೇವಾರಿಯಾಗಿರುತ್ತದೆ.

ಟ್ರಾಫಿಕ್‌ನಲ್ಲಿ ಸಿಕ್ಕಿಬೀಳುವುದು, ಕ್ಯಾಬ್ ಡ್ರೈವರ್ ದೂರದ ಮಾರ್ಗದಲ್ಲಿ ಬಂದ ಎಂದು ಹೇಳುವುದು……. ಹೀಗೆ ಏನೇನೋ ಕಾರಣಗಳನ್ನು ನೀಡುವುದು ಉಂಟು.

ಆದರೆ ಇಲ್ಲೊಬ್ಬ ಉದ್ಯೋಗಿ ನೀಡಿರುವ ಕಾರಣ ಈಗ ವೈರಲ್​ ಆಗಿದೆ. ಉಜ್ಜವಲ್ ಅಥ್ರವ್ ಎಂಬ ಟ್ವಿಟರ್ ಬಳಕೆದಾರರು ಇದನ್ನು ಶೇರ್​ ಮಾಡಿದ್ದಾರೆ.

ಉಜ್ಜವಲ್ ಅವರು ತಡವಾಗಿ ಲಾಗಿನ್ ಆಗಲು ಕಾರಣದ ಬಗ್ಗೆ ತಮ್ಮ ಬಾಸ್ ಜೊತೆಗಿನ ಸಂಭಾಷಣೆಯ ಸ್ಕ್ರೀನ್‌ ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಕಂಪ್ಯೂಟರ್​ ಲಾಗಿನ್​ ಲೇಟ್​ ಆದ ಕಾರಣವನ್ನು ಕೇಳುವುದರೊಂದಿಗೆ ಸಂಭಾಷಣೆಯು ಪ್ರಾರಂಭವಾಗುತ್ತದೆ.

ಅಹೆಮ್‌ಜಿಯವರ ಅವರ ಹಾಸ್ಯದ ತುಣುಕನ್ನು ಉತ್ತರವಾಗಿ ಉಜ್ವವಲ್​ ನೀಡಿದ್ದಾರೆ. ಅದರಲ್ಲಿ ಅಹೆಮ್‌ಜಿಯವರ ಪತ್ನಿ ಲ್ಯಾಪ್‌ಟಾಪ್ ತೊಳೆಯುತ್ತಿರುವುದನ್ನು ನೋಡಬಹುದು. ತಮಗೂ ಹೀಗೆ ಆಯಿತು ಎಂದು ಹೇಳಿದ್ದಾರೆ.

ಅದನ್ನು ನೋಡಿದ ಬಾಸ್​ ಸುಮ್ಮನೇ ಇರದೇ, ಇರಲಿ ಇರಲಿ ನಾನೂ ನಿಮ್ಮ ಪ್ರಮೋಷನ್​ಗೆ ಹೀಗೆ ನೀರು ಸುರಿಯುತ್ತೇನೆ ಎಂದು ಬಾಸ್​ ಉತ್ತರಿಸಿದ್ದು, ನೆಟ್ಟಿಗರು ಇದನ್ನು ನೋಡಿ ಬಿದ್ದೂ ಬಿದ್ದು ನಗುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read