ಆನ್ಲೈನ್ ಡೇಟಿಂಗ್ ಈಗಿನ ದಿನಗಳಲ್ಲಿ ಹೆಚ್ಚಾಗಿದೆ. ಆನ್ಲೈನ್ ನಲ್ಲಿಯೇ ಪರಸ್ಪರ ಇಷ್ಟಪಡುವ ಜನರು ಭೇಟಿ ವೇಳೆ ನೇರವಾಗಿ ವಿಷ್ಯಕ್ಕೆ ಬರ್ತಾರೆ. ಆನ್ಲೈನ್ ಡೇಟಿಂಗ್ ಎಷ್ಟು ಸುರಕ್ಷಿತವೋ ಅಷ್ಟೇ ಅಪಾಯಕಾರಿ. ಪರಸ್ಪರ ಭೇಟಿ ವೇಳೆ ಅನೇಕ ಸವಾಲುಗಳು ಎದುರಾಗುತ್ತವೆ. ಆನ್ಲೈನ್ ನಲ್ಲಿ ಹೇಳಿದ್ದ ಸುಳ್ಳುಗಳು ಒಂದೊಂದಾಗೆ ಹೊರಗೆ ಬರುತ್ತವೆ. ಈಗ ಈ ವ್ಯಕ್ತಿಗೂ ಅದೇ ಆಗಿದೆ. ಆನ್ಲೈನ್ ನಲ್ಲಿ ಸಿಕ್ಕ ಹುಡುಗಿ ಜೊತೆ ಡೇಟಿಂಗ್ ಗೆ ಹೋಗಿ ಪೇಚಿಗೆ ಸಿಕ್ಕಿದ್ದಾನೆ.
ನೊಂದ ವ್ಯಕ್ತಿ ಟಿಕ್ ಟಾಕ್ ನಲ್ಲಿ ಘಟನೆಯನ್ನು ವಿವರಿಸಿದ್ದಾನೆ. ಡೇಟಿಂಗ್ ಅಪ್ಲಿಕೇಶನ್ ಬಂಬಲ್ನಲ್ಲಿ ಸಿಡ್ನಿ ಎಂಬ ಮಹಿಳೆಯನ್ನು ಭೇಟಿಯಾಗಿದ್ದ. ಫೋನ್ನಲ್ಲಿ ಸಾಕಷ್ಟು ಸಂಭಾಷಣೆ ನಡೆದ ನಂತ್ರ ಭೇಟಿಯಾಗಲು ಮುಂದಾಗಿದ್ದರು.
ಸಿಡ್ನಿ ಫೋಟೋದಂತೆ ಇರಲಿಲ್ಲ. ಆಕೆಯ ಎಲ್ಲ ಫೋಟೋಗಳು ಫಿಲ್ಟರ್ ಆಗಿದ್ದವು. ಮಕ್ಕಳಿಲ್ಲ ಎಂದು ಸಿಡ್ನಿ ಹೇಳಿದ್ದಳು. ಆದ್ರೆ ಆಕೆ ಮಗುವನ್ನು ಹೊಂದಿದ್ದಾಳೆ ಎಂಬುದು ಇನ್ಸ್ಟಾಗ್ರಾಮ್ ಮೂಲಕ ಗೊತ್ತಾಯ್ತು. ಇಷ್ಟಾದ್ರೂ ಆತ ಸಿಡ್ನಿ ಭೇಟಿಗೆ ಹೋಗಿದ್ದ. ಹೊಟೇಲ್ ನಲ್ಲಿ ಸಿಡ್ನಿ ಅವತಾರ ನೋಡಿ ದಂಗಾಗಿದ್ದಾನೆ.
ಹೊಟೇಲ್ ನಲ್ಲಿ ಸಿಡ್ನಿ 53 ಹುರಿದ ಉಪ್ಪಿನಕಾಯಿಗಳನ್ನು ತಿಂದಿದ್ದಾಳೆ. ವೇಟರ್ ಆರು – ಆರು ಉಪ್ಪಿನಕಾಯಿಯಂತೆ ಆಕೆ ಹೇಳಿದಾಗೆಲ್ಲ ತಂದಿದ್ದಾನೆ. ಆತ ಸ್ವಲ್ಪ ಸ್ವಲ್ಪ ಉಪ್ಪಿನಕಾಯಿಯನ್ನು ಪ್ಲೇಟ್ ಗೆ ಹಾಕ್ತಿದ್ದರೆ ಸಿಡ್ನಿ ಕೋಪಗೊಂಡಿದ್ದಾಳೆ. ಎಲ್ಲವನ್ನೂ ಒಟ್ಟಿಗೆ ಹಾಕುವಂತೆ ಹೇಳಿದ್ದಾಳೆ.
ಊಟ ಮುಗಿತಾ ಬಂದಂತೆ ವ್ಯಕ್ತಿ ವಾಶ್ ರೂಮಿಗೆ ಹೋಗಿ ವಾಪಾಸ್ ಆಗಿದ್ದಾನೆ. ಆದ್ರೆ ಸಿಡ್ನಿ ಅಲ್ಲಿರಲಿಲ್ಲ. ಬರೋಬ್ಬರಿ 11 ಸಾವಿರ ಬಿಲ್ ಮಾಡಿ ಅಲ್ಲಿಂದ ಪರಾರಿಯಾಗಿದ್ದಾಳೆ. ಬಿಲ್ ನೋಡಿ ಶಾಕ್ ಆದ ವ್ಯಕ್ತಿ ಈ ವಿಷ್ಯವನ್ನು ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾನೆ. ವಿಡಿಯೋ ನೋಡಿದ ಬಳಕೆದಾರರು, ಉಪ್ಪಿನಕಾಯಿಗೆ ಇಷ್ಟೊಂದು ಹಣ ನೀಡಿದ್ದಕ್ಕೆ ಮರುಕ ವ್ಯಕ್ತಪಡಿಸಿದ್ದಾರೆ.