ರೈಲಿನಲ್ಲಿದ್ದ ಬಂಗಾಳಿ ಬಾಬಾ ಪೋಸ್ಟರ್​ ಹರಿದುಹಾಕಿದ ಪ್ಯಾಸೆಂಜರ್: ಪೋಸ್ಟ್​ ವೈರಲ್​

VIRAL: Man removes 'Bengali Baba' posters from Mumbai local train during his travel; internet reactsನೀವು ಮುಂಬೈ ಲೋಕಲ್ ರೈಲುಗಳ ಮೂಲಕ ಪ್ರಯಾಣಿಸುತ್ತಿದ್ದರೆ, ಕೆಲವೊಂದು ಪೋಸ್ಟರ್‌ಗಳನ್ನು ನೀವು ನೋಡಬಹುದು. ಅದರಲ್ಲಿ ಗಮನ ಸೆಳೆಯುವುದು ‘ಬಂಗಾಳಿ ಬಾಬಾ’ ಪೋಸ್ಟರ್​. ಬ್ಲ್ಯಾಕ್ ಮ್ಯಾಜಿಕ್ ಮಾಡಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಹೇಳಿಕೊಳ್ಳುವ ಜನರನ್ನು ಬಂಗಾಳಿ ಬಾಬಾ ಎನ್ನುತ್ತಾರೆ.

ಜಯೇಶ್ ಎಸ್. ಎಂಬ ಟ್ವಿಟರ್​ ಬಳಕೆದಾರರು ರೆಡ್ಡಿಟ್‌ನಲ್ಲಿ ಈ ಪೋಸ್ಟರ್​ಗಳನ್ನು ರೈಲ್ವೆಯಲ್ಲಿ ಅಂಟಿಸುವ ವ್ಯಕ್ತಿಯ ಫೋಟೋ ಶೇರ್​ ಮಾಡಿದ್ದಾರೆ. ರೈಲಿನಲ್ಲಿ ಸಿಎಸ್‌ಎಂಟಿ ರೈಲು ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದಾಗ ತಾವು ಪಯಣಿಸುತ್ತಿದ್ದ ಕೋಚ್‌ನಲ್ಲಿ ಬೆಂಗಾಲಿ ಬಾಬಾ ಪೋಸ್ಟರ್‌ಗಳನ್ನು ಅಂಟಿಸುವ ವ್ಯಕ್ತಿಯನ್ನು ಗಮನಿಸಿದಾಗ ಫೋಟೋ ಕ್ಲಿಕ್ಕಿಸಿದ್ದಾರೆ.

ಮಾರ್ಚ್ 10 ರಂದು ಬೆಳಗಿನ ಜಾವ ಈ ಘಟನೆ ನಡೆದಿದೆ. ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ನಾನು ಈ ಪೋಸ್ಟರ್‌ಗಳನ್ನು ಅಲ್ಲಿಯೇ ಹರಿದು ಹಾಕಿದ್ದೇನೆ. ಎಲ್ಲರೂ ಹೀಗೆಯೇ ಮಾಡಬೇಕು ಎಂದಿದ್ದಾರೆ.

“ನಾನು ಇಂದು ಬೆಳಗ್ಗೆ 6 ಗಂಟೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಒಬ್ಬ ವ್ಯಕ್ತಿ ಬಂದು ಪೋಸ್ಟರ್​ ಅಂಟಿಸಿದ. ಅದನ್ನು ಅವನ ಮುಂದೆಯೇ ಹರಿದು ಹಾಕಿದೆ” ಎಂದು ಹರಿದ ಕಾಗದದ ತುಂಡುಗಳಿಂದ ಚಿತ್ರದೊಂದಿಗೆ ಪೋಸ್ಟ್​ ಮಾಡಿದ್ದಾರೆ. ಇವರ ಕಾರ್ಯಕ್ಕೆ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

https://twitter.com/fpjindia/status/1634849097793544192

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read