SHOCKING: ತಂದೆಯಿಂದಲೇ ಘೋರ ಕೃತ್ಯ; ಪುತ್ರಿ, ಆಕೆಯ ಸ್ನೇಹಿತೆ ಮೇಲೆ ಅತ್ಯಾಚಾರ

ಸಹರಾನ್‌ ಪುರ(ಉತ್ತರ ಪ್ರದೇಶ): ಅಪ್ರಾಪ್ತ ಮಗಳು ಮತ್ತು ಆಕೆಯ ಸ್ನೇಹಿತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗಗಲ್ಹೆಡಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ಮಾಜಿ ಮುಖ್ಯಸ್ಥನನ್ನು ಶುಕ್ರವಾರ ಸಂಜೆ ಬಂಧಿಸಲಾಗಿದೆ ಎಂದು ಎಸ್ಪಿ ಸಿಟಿ ಅಭಿಮನ್ಯು ಮಾಂಗ್ಲಿಕ್ ತಿಳಿಸಿದರು.

ಅಪ್ರಾಪ್ತ ಬಾಲಕಿಯು ತನ್ನ ದೂರಿನಲ್ಲಿ ತನ್ನ ತಂದೆ ತನ್ನ ಮೇಲೆ ಮತ್ತು ಸಬಾಲ್ ಜಿಲ್ಲೆಯ ತನ್ನ ಸ್ನೇಹಿತೆ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪಿಸಿದ್ದಾಳೆ.

ಸಾಮಾಜಿಕ ಒತ್ತಡದಿಂದಾಗಿ ಅವರು ದೂರು ಕೊಡಲು ಆಗಿರಲಿಲ್ಲ. ಆದರೆ ನಂತರ ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ. ಸಂತ್ರಸ್ತರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎಸ್ಪಿ ಮಾಂಗ್ಲಿಕ್ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read