ಮೃಗಾಲಯದಲ್ಲಿ ಪ್ರಾಣಿಗಳು ನೋಡಲು ನಿರುಪ್ರದವಿಯಾಗಿ ಕಂಡರೂ ಅದರ ಹತ್ತಿರ ಹೋಗುವಂಥ ಕೆಲಸ ಯಾವತ್ತೂ ಮಾಡಬಾರದು. ನಮ್ಮ ಜೀವಕ್ಕೆ ಅಪಾಯವಾಗುವಂಥ ಸನ್ನಿವೇಶವನ್ನು ನಾವೇ ಸೃಷ್ಟಿ ಮಾಡಬಾರದು. ಒಂದು ವೇಳೆ ನಿಯಮ ಮೀರಿ ಪ್ರಾಣಿಗಳ ಪಂಜರದೊಳಗೆ ಹೋದರೆ ಏನಾಗುತ್ತದೆ ಎಂಬುದಕ್ಕೆ ಇದೀಗ ವೈರಲ್ ಆಗಿರುವ ವಿಡಿಯೋ ಸಾಕ್ಷಿಯಾಗಿದೆ.
ಹೌದು, ವ್ಯಕ್ತಿಯೊಬ್ಬ ಪಾಂಡಾ ಆವರಣಕ್ಕೆ ನುಗ್ಗಿ ಪ್ರಾಣಿಯ ಕೆಂಗಣ್ಣಿಗೆ ಗುರಿಯಾಗಿರುವ ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದೆ. ಯುವಕನೊಬ್ಬ ತನ್ನ ಆವರಣದೊಳಗೆ ಮಲಗಿದ್ದ ಪಾಂಡಾದತ್ತ ಸಮೀಪಿಸಿದ್ದಾನೆ. ಆ ವೇಳೆಗೆ ಅದು ನಿದ್ರಿಸುತ್ತಿರುವಂತೆ ತೋರುತ್ತಿದೆ. ಈ ವೇಳೆ ಪಾಂಡಾವನ್ನು ಆ ವ್ಯಕ್ತಿ ಚುಚ್ಚುತ್ತಾನೆ. ಇದರಿಂದ ಎಚ್ಚೆತ್ತ ಪಾಂಡಾ ಆ ವ್ಯಕ್ತಿಯ ಕಾಲನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆ.
ವ್ಯಕ್ತಿಯು ಭೀತಿಗೊಂಡಂತೆ ತೋರುತ್ತದೆ. ಆತ ತನ್ನನ್ನು ಪ್ರಾಣಿಯ ಹಿಡಿತದಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತಾನೆ. ಆದರೆ, ಅದು ಸಾಧ್ಯವಾಗದೆ ಆತ ಮುಗ್ಗರಿಸಿ ಬೀಳುತ್ತಾನೆ. ಬಹಳ ಪ್ರಯತ್ನ ಪಟ್ಟ ಬಳಿಕ ಪ್ರಾಣಿಯಿಂದ ತನ್ನನ್ನು ಮುಕ್ತಗೊಳಿಸಿ, ಆವರಣದಿಂದ ಹೊರಗೆ ಓಡುತ್ತಾನೆ.
ಈ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ 4.2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ವ್ಯಕ್ತಿ ಪಾಂಡಾಕ್ಕೆ ಕೀಟಲೆ ಮಾಡಿದ್ರೂ ಅದು ಆತನ ಜೀವ ಉಳಿಸಿದ್ದು ಆತನ ಅದೃಷ್ಟ ಎಂದು ಹಲವು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಅಂದಹಾಗೆ ಈ ಘಟನೆ ಚೀನಾದ ಜಿಯಾಂಗ್ಸಿ ಪ್ರಾಂತ್ಯದ ನಾನ್‌ಚಾಂಗ್ ಮೃಗಾಲಯದಲ್ಲಿ ನಡೆದಿದೆ. ಸ್ಥಳದಲ್ಲಿದ್ದ ಮತ್ತೊಬ್ಬ ಪ್ರವಾಸಿಗರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಪಾಂಡಾಗಳು ನಿರುಪದ್ರವವಾಗಿ ತೋರುತ್ತಿದ್ದರೂ, ಅವು ತಮ್ಮ ಹಲ್ಲುಗಳು ಮತ್ತು ಚೂಪಾದ ಉಗುರುಗಳಿಂದ ಗಂಭೀರ ಗಾಯಗೊಳಿಸಬಹುದು.
https://twitter.com/cctvidiots/status/1719041386178396224?ref_src=twsrc%5Etfw%7Ctwcamp%5Etweetembed%7Ctwterm%5E1719041386178396224%7Ctwgr%5E92503fafebb50753f9e67ab6cb7a4be9dbd7849b%7Ctwcon%5Es1_&ref_url=https%3A%2F%2Fwww.news18.com%2Fviral%2Fman-jumps-into-cage-to-watch-panda-closely-what-happens-next-will-shock-you-8643415.html