Video: ಅದಾನಿ ವಿರುದ್ಧದ ಪ್ರತಿಭಟನೆಗೆ ಮದುಮಗನ ಅವತಾರ…!

ಅದಾನಿ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್‌ ಜೊತೆ ಸೇರಿದ ವ್ಯಕ್ತಿಯೊಬ್ಬ ಮದುಮಗನ ಧಿರಿಸಿನಲ್ಲಿ ಆಗಮಿಸಿದ್ದು, 2000 ರೂ. ನೋಟುಗಳ ಹಾರದೊಂದಿಗೆ ಎಲ್ಲರ ಗಮನ ಸೆಳೆದಿದ್ದಾನೆ.

ಬ್ಯಾರಿಕೇಡ್‌ಗಳನ್ನು ಬಳಸಿ ಪ್ರತಿಭಟನಾಕಾರರನ್ನು ನಿಯಂತ್ರಣಕ್ಕೆ ತಂದ ಪೊಲೀಸರು, ಶಾಂತಿ ಕಾಪಾಡಲು ಮನವಿ ಮಾಡುತ್ತಿದ್ದು. ಇದೇ ವೇಳೆ ಈ ’ಮದುಮಗನನ್ನು’ ಎತ್ತಿಕೊಂಡ ಪ್ರತಿಭಟನಾಕಾರರು ಆತನನ್ನು ಬ್ಯಾರಿಕೇಡ್‌‌ಗಳ ಆಚೆ ನಿಂತಿದ್ದ ಪೊಲೀಸರತ್ತ ರವಾನೆ ಮಾಡಲು ಯತ್ನಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಅಮೆರಿಕ ಮೂಲದ ಶಾರ್ಟ್ ಸೆಲ್ಲರ್‌ ಸಂಸ್ಥೆ ಹಿಂಡನ್‌ಬರ್ಗ್ ರೀಸರ್ಚ್ ಮಾಡಿರುವ ಸಾಲು ಸಾಲು ಆಪಾದನೆಗಳಿಂದ ಅದಾನಿ ಸಮೂಹದ ಶೇರು ಮೌಲ್ಯಗಳಲ್ಲಿ ಭಾರೀ ಕುಸಿತ ಕಂಡ ವಾರಗಳ ಬಳಿಕವೂ ಈ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ತನ್ನ ವಾಗ್ದಾಳಿ ಮುಂದುವರೆಸಿದೆ.

ಆದರೆ ಈ ಎಲ್ಲ ಆಪಾದನೆಗಳನ್ನು ಅಲ್ಲಗಳೆಯುತ್ತಲೇ ಸಾಗಿರುವ ಅದಾನಿ ಸಮೂಹ ತಾನು ಯಾವುದೇ ಕಾನೂನು ಅಥವಾ ನಿಯಮವನ್ನು ಉಲ್ಲಂಘನೆ ಮಾಡಿಲ್ಲ ಎಂದು ಹೇಳುತ್ತಲೇ ಬಂದಿದೆ.

https://twitter.com/ANI/status/1636262576995590144?ref_src=twsrc%5Etfw%7Ctwcamp%5Etweetembed%7Ctwterm%5E16362625769955

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read