ಸಂಚಾರ ದಟ್ಟಣೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಪೇದೆಯ ಮೊಗದಲ್ಲಿ ನಗು ಮೂಡಿಸಿದ ಕಲಾವಿದ

ಅನ್ಯರ ಮೊಗದಲ್ಲಿ ನಗು ಮೂಡಿಸುವ ಮನಸ್ಸು ಎಲ್ಲರಲ್ಲಿ ಮೂಡಿದಾಗ ಇಡೀ ಜಗತ್ತೇ ಆನಂದಮಯವಾಗುತ್ತದೆ. ವಾಹನ ದಟ್ಟಣೆ ನಿಯಂತ್ರಿಸುವಲ್ಲಿ ನಿರತರಾಗಿರುವ ಪೊಲೀಸ್ ಪೇದೆಯೊಬ್ಬರ ಚಿತ್ರ ಬಿಡಿಸುವ ಮೂಲಕ ಅವರ ಮೊಗದಲ್ಲಿ ನಗು ಮೂಡಿಸಿದ ಕಲಾವಿದರೊ‌ಬ್ಬರು ನೆಟ್ಟಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕೇರಳ ಪೊಲೀಸ್‌ ಈ ವಿಡಿಯೋವನ್ನು ತನ್ನ ಅಧಿಕೃತ ಟ್ವಿಟರ್‌ ಪೇಜ್‌ನಲ್ಲಿ ಶೇರ್‌ ಮಾಡಿಕೊಂಡಿದೆ. ಶಿಮ್ಲಾಲ್ ಎಂಬ ಕಲಾವಿದ ಈ ಚಿತ್ರವನ್ನು ರಚಿಸಿದ್ದಾರೆ.

ಬ್ಯುಸಿ ರಸ್ತೆಯೊಂದರಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುತ್ತಿರುವ ಪೊಲೀಸ್ ಪೇದೆಯೊಬ್ಬರು ಹೀಗೆ ಕರ್ತವ್ಯದಲ್ಲಿರುವ ತಮ್ಮ ಚಿತ್ರವನ್ನು ಪಡೆದಾಗ ಅವರ ಮೊಗದಲ್ಲಿ ಮೂಡಿದ ನಗು ನೋಡುಗರಿಗೆ ಭಾರೀ ಇಷ್ಟವಾಗಿದೆ.

ಎಂಥ ಕಠಿಣ ವಾತಾವರಣದಲ್ಲೂ ತಮ್ಮ ಕರ್ತವ್ಯವನ್ನು ನಿರ್ವಹಿಸುವುದನ್ನು ಬಿಡದ ಪೊಲೀಸರನ್ನು ನೆನೆದ ನೆಟ್ಟಿಗರು ಅವರ ಗೌರವಾರ್ಥ ಕಾಮೆಂಟ್‌ಗಳನ್ನು ಹಾಕಿದ್ದಾರೆ.

https://twitter.com/TheKeralaPolice/status/1646108684291039234?ref_src=twsrc%5Etfw%7Ctwcamp%5Etweetembed%7Ctwterm%5E1646108684291039234%7Ctwgr%5E25eedd4b1a4057d9ad0afc25d805e5b3d6f44596%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-draws-traffic-cops-portrait-while-he-was-stuck-in-jam-kerala-police-shares-sweet-video-2361693-2023-04-18

https://twitter.com/rahulhunts/status/1646166274676862981?ref_src=twsrc%5Etfw%7Ctwcamp%5Etweetembed%7Ctwterm%5E1646166274676862981%7Ctwgr%5E25eedd4b1a4057d9ad0afc25d805e5b3d6f44596%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-draws-traffic-cops-portrait-while-he-was-stuck-in-jam-kerala-police-shares-sweet-video-2361693-2023-04-18

https://twitter.com/Gireesh001819/status/1646205618678644759?ref_src=twsrc%5Etfw%7Ctwcamp%5Etweetembed%7Ctwterm%5E1646205618678644759%7Ctwgr%5E25eedd4b1a4057d9ad0afc25d805e5b3d6f44596%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fman-draws-traffic-cops-portrait-while-he-was-stuck-in-jam-kerala-police-shares-sweet-video-2361693-2023-04-18

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read