ಚಾಮರಾಜನಗರ : ಕುಡಿದ ಮತ್ತಿನಲ್ಲಿ ನೀರೆಂದು ಭಾವಿಸಿ ಆ್ಯಸಿಡ್ ಕುಡಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ.
ಮೃತನ್ನು ಸಿದ್ದರಾಜು (40) ಎಂದು ಗುರುತಿಸಲಾಗಿದೆ. ಕುಡಿದ ಮತ್ತಿನಲ್ಲಿ ನೀರು ಎಂದು ಭಾವಿಸಿ ಟಾಯ್ಲೆಟ್ ಕ್ಲೀನಿಂಗ್ಗೆ ಬಳಸುವ ಆ್ಯಸಿಡ್ ಕುಡಿದಿದ್ದಾನೆ. ಇದರಿಂದ ಕೆಳಗೆ ಬಿದ್ದು ಒದ್ದಾಡುತ್ತಿದ್ದ ಸಿದ್ದರಾಜುನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.