ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಫೆವರೆಟ್ ಚಿಪ್ಸ್ ಲೇಸ್. ಆದ್ರೆ ಈ ಚಿಪ್ಸ್ ಪ್ಯಾಕೆಟ್ ನಲ್ಲಿರುವ ಚಿಪ್ಸ್ ಮಾತ್ರ ನಾಲ್ಕಕ್ಕಿಂತ ಮೇಲೆ ಹೋಗೋದಿಲ್ಲ. ಈ ಹಿಂದೆ ಚಿಪ್ಸ್ ಪ್ಯಾಕೆಟ್ 30 ಗ್ರಾಂ ಬದಲು 8 ಗ್ರಾಂ ಇದೆ ಎಂದು ಗ್ರಾಹಕರೊಬ್ಬರು ಕೋರ್ಟ್ ಮೊರೆ ಹೋಗಿದ್ದರು. ಪೆಪ್ಸಿಕೋ ವಿರುದ್ಧ ಮೊಕದ್ದಮೆ ಹೂಡಿದ್ದರು.
ಕೋರ್ಟ್, 90 ದಿನಗಳಲ್ಲಿ ಗ್ರಾಹಕರ ಕಲ್ಯಾಣ ನಿಧಿಯಲ್ಲಿ 50,000 ರೂ.ಗಳನ್ನು ಠೇವಣಿ ಮಾಡುವಂತೆ ಪೆಪ್ಸಿಕೋಗೆ ಆದೇಶಿಸಿತ್ತು. ಅಲ್ಲದೆ ಗ್ರಾಹಕನಿಗೆ 5,000 ರೂಪಾಯಿ ಹಾಗೂ ಕಾನೂನು ಶುಲ್ಕವಾಗಿ 2,000 ರೂಪಾಯಿ ಪಾವತಿಸುವಂತೆ ಆದೇಶ ಮಾಡಿತ್ತು. ಈಗ ಲೇಸ್ ನ ಇನ್ನೊಂದು ಫೋಟೋ ವೈರಲ್ ಆಗಿದೆ. ಅದ್ರಲ್ಲಿ ವ್ಯಕ್ತಿಯೊಬ್ಬ ತನ್ನ ನೋವನ್ನು ತೋಡಿಕೊಂಡಿದ್ದಾನೆ.
ಗೋವಾದ ಪೆಟ್ರೋಲ್ ಬಂಕ್ ನಲ್ಲಿ ಆತ ಲೇಸ್ ಪ್ಯಾಕ್ ಖರೀದಿ ಮಾಡಿದ್ದಾನೆ. ತುಂಬಾ ಹಸಿದಿದ್ದ ಆತನಿಗೆ ಪ್ಯಾಕ್ ಓಪನ್ ಮಾಡ್ತಿದ್ದಂತೆ ಬೇಸರವಾಗಿದೆ. ಯಾಕೆಂದ್ರೆ ಅದಲ್ಲಿ ಇದ್ದಿದ್ದು ಬರೀ ನಾಲ್ಕು ಚಿಪ್ಸ್. ಗ್ರಾಹಕ ಇದ್ರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
ಬಳಕೆದಾರರು ದೂರು ನೀಡುವಂತೆ ಒತ್ತಾಯಿಸಿದ್ದಾರೆ. ಕೆಲವರು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.