Shocking: ಸ್ವಂತ ತಂಗಿಯ ರುಂಡವನ್ನೇ ಕೈಯಲ್ಲಿ ಹಿಡಿದು ನಡುರಸ್ತೆಯಲ್ಲಿ ತಿರುಗಾಡಿದ ಅಣ್ಣ ಅರೆಸ್ಟ್​

ಸ್ವಂತ ಸಹೋದರಿಯ ಶಿರಚ್ಚೇದ ಮಾಡಿದ ಕಿರಾತಕನೊಬ್ಬ ಆಕೆಯ ರುಂಡವನ್ನು ಕೈಯಲ್ಲಿ ಹಿಡಿದು ರಸ್ತೆಯಲ್ಲಿ ರಾಜಾರೋಷವಾಗಿ ನಡೆದುಕೊಂಡ ಹೋದ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. 24 ವರ್ಷದ ಮೊಹಮ್ಮದ್​ ರಿಯಾಜ್ ಎಂಬಾತ ತನ್ನ 19 ವರ್ಷದ ಸಹೋದರಿಯ ಪ್ರೇಮ ಸಂಬಂಧದ ಬಗ್ಗೆ ಅಸಮಾಧಾನ ಹೊಂದಿದ್ದ ಎನ್ನಲಾಗಿದೆ. ತಂಗಿಯ ರುಂಡವನ್ನು ಹಿಡಿದು ರಿಯಾಜ್​ ನಿಂತಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗ್ತಿದೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಮಿಥ್ವಾರಾ ಗ್ರಾಮದ ರಸ್ತೆಯಲ್ಲಿ ಮಹಿಳೆಯ ರುಂಡವನ್ನು ಹಿಡಿದ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದ. ಸಾರ್ವಜನಿಕರಿಂದ ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ರಿಯಾಜ್​ನನ್ನು ಬಂಧಿಸಿದ್ದಾರೆ. ಆರೋಪಿ ರಿಯಾಜ್​ನನ್ನು ಫತೇಪುರ ಠಾಣೆಗೆ ಕರೆದೊಯ್ಯಲಾಗಿದೆ. ಇದಾದ ಬಳಿಕ ಪೊಲೀಸರು ರಿಯಾಜ್​​​ ಮನೆಗೆ ತೆರಳಿ ಯುವತಿಯ ಇನ್ನುಳಿದ ಮೃತದೇಹದ ಭಾಗವನ್ನು ವಶಕ್ಕೆ ಪಡೆದಿದ್ದಾರೆ.

ಸರ್ಕಲ್​ ಆಫೀಸರ್​​ ರಘುವೀರ್​ ಸಿಂಗ್​ ಈ ವಿಚಾರವಾಗಿ ಮಾತನಾಡಿದ್ದು, ವಿಚಾರಣೆಯ ಸಂದರ್ಭದಲ್ಲಿ ಆರೋಪಿಯು ತನ್ನ ಸಹೋದರಿಯ ಪ್ರೇಮ ಸಂಬಂಧವು ನನ್ನ ಕೋಪಕ್ಕೆ ಕಾರಣವಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದಾರೆ.

ಶುಕ್ರವಾರ ಬೆಳಗ್ಗೆ 11:30 ರ ಸುಮಾರಿಗೆ ಇದೇ ವಿಚಾರಕ್ಕೆ ರಿಯಾಜ್​ ತನ್ನ ಸಹೋದರಿಯ ಜೊತೆ ಜಗಳವಾಡಿದ್ದ. ಆಕೆ ತನ್ನ ಪ್ರೇಮ ಸಂಬಂಧವನ್ನು ಮುರಿದುಕೊಳ್ಳಲು ಒಪ್ಪಿಕೊಂಡಿರಲಿಲ್ಲ ಎನ್ನಲಾಗಿದೆ. ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಇಬ್ಬರ ನಡುವೆ ಜಗಳ ತಾರಕಕ್ಕೇರಿದ್ದು ರಿಯಾಜ್​ ಹೊರಗೆ ಹೋಗಿ ಕೊಡಲಿ ತಂದು ಆಕೆಯ ರುಂಡ ಕಡಿದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read