35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ನ್ಯೂಯಾರ್ಕ್‌ನಲ್ಲಿ ತಮ್ಮ ಸ್ನೇಹಿತರ ಜೊತೆ ರಾತ್ರಿ ಎಫೆಸ್ ಕಬಾಬ್ ಕಿಚನ್ ಫುಡ್ ಸೆಂಟರ್ಗೆ ಹೋಗಿ ಬರ್ಗರ್ ಆರ್ಡರ್ ಮಾಡಿದ್ದು, ಇದೀಗ ಭಾರಿ ವೈರಲ್ ಆಗಿದೆ. ಏಕೆಂದರೆ ಇದು ಅವರ ಜೀವನದಲ್ಲಿ ಬಹು ದುಬಾರಿ ಬರ್ಗರ್ ಆಗಿ ಪರಿಣಮಿಸಿದೆ.
ಬರ್ಗರ್ ತಿಂಗು ಮನೆಗೆ ಬಂದಾಗ ಅವರ ಬ್ಯಾಂಕ್ನಿಂದ 66 ಸಾವಿರ ರೂಪಾಯಿ ಕಟ್ ಆಗಿತ್ತು. ಆಮೇಲೆ ತಿಳಿದದ್ದು ದುಡ್ಡು ನೀಡುವಾಗ ತಿಳಿಯದೇ 66 ಸಾವಿರ ರೂಪಾಯಿ ಪೇ ಮಾಡಿರುವುದಾಗಿ. ಮದ್ಯಪಾನ ಮಾಡದಿದ್ದರೂ ತಮಗೆ ಹೀಗೆ ಏಕೆ ಆಯಿತು ಎಂದು ಚಿಂತಿಸಿದ್ದಾರೆ.
ನಂತರ ಸ್ನೇಹಿತನ ಸಲಹೆ ಮೇರೆಗೆ ವಾಪಸ್ ಮಳಿಗೆಗೆ ಹೋಗಿದ್ದಾರೆ. ಅವರು ತಮ್ಮ ತಪ್ಪು ಇಲ್ಲ. ಬ್ಯಾಂಕ್ಗೆ ಕೇಳಿ ಎಂದಿದ್ದಾರೆ. ಬ್ಯಾಂಕ್ನಲ್ಲಿ ವಿಚಾರಿಸಿದರೂ ದೂರು ದಾಖಲು ಮಾಡಿದರೂ ಸದ್ಯ ಹಣ ವಾಪಸ್ ಬರಲಿಲ್ಲ. ಇದು ನಡೆದು ತಿಂಗಳು ಆದರೂ ಕಟ್ ಆಗಿರೋ ಹಣ ವಾಪಸ್ ಬರಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ದುಃಖ ತೋಡಿಕೊಂಡಿದ್ದು, ಅದಕ್ಕೆ ಹಲವರು ಹಲವು ರೀತಿಯ ಸಲಹೆ ನೀಡುತ್ತಿದ್ದಾರೆ.