
ಚಿತ್ರದಲ್ಲಿ ಹಪ್ಪಳ ತುಂಬಿದ ಪ್ಲೇಟ್ ತೋರಿಸಲಾಗಿದೆ. ಅದರ ಬದಿಯಲ್ಲಿ ಇರುವ ಮೆನುವಿನಲ್ಲಿ “Asian nachos” ಎಂದು ಬರೆದಿರುವುದನ್ನು ನೋಡಬಹುದು. ಈ ಪೋಸ್ಟ್ ಕಂಡು ಕೆಲವರು ನಗುತ್ತಿದ್ದರೆ, ಭಾರತದ ತಿನಿಸನ್ನು ಹೀಗೆ ಮಾಡಿರುವ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಪೋಸ್ಟ್ ಇದಾಗಲೇ 8 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದಿದ್ದು, 4.37 ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ. ಹಲವರು ಇದಕ್ಕೆ ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಇನ್ನು ಮುಂದೆ ನಾವು ಹಪ್ಪಳವನ್ನು ನ್ಯಾಚೋಸ್ ಎಂದು ಕರೆದರೆ ಸ್ಪೆಷಲ್ ಡಿಷ್ ಎಂದು ಎನಿಸುತ್ತದೆ ಎಂದಿದ್ದಾರೆ. ಇನ್ನು ಕೆಲವರು ನಮ್ಮ ಮನೆಗೆ ಅತಿಥಿಗಳು ಬಂದಾಗ ನಾವು ಊಟಕ್ಕೆ ನ್ಯಾಚೋಸ್ ಮಾಡಿದ್ದೇವೆ ಎಂದು ಹೇಳಬಹುದು, ಇದರಿಂದ ಅತಿಥಿಗಳು ಹೊಸ ಬಗೆಯ ತಿನಿಸು ಎಂದು ಖುಷಿ ಪಟ್ಟುಕೊಳ್ಳುತ್ತಾರೆ ಎಂದಿದ್ದಾರೆ.