ಶಂಕರ್ ನಿರ್ದೇಶನದ ರಾಮ್‌ಚರಣ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ‘ಗೇಮ್ ಚೇಂಜರ್’ 2025ರ ಜನವರಿ 10 ರಂದು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಬಿಡುಗಡೆ ದಿನಾಂಕವು ಹತ್ತಿರವಾಗುತ್ತಿರುವಂತೆ, ನಿರ್ಮಾಪಕರು ಚಿತ್ರದ ಹಾಡುಗಳ ಪ್ರಚಾರವನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಚಿತ್ರದ ನಾಲ್ಕನೇ ಹಾಡು ‘ಧೋಪ್’ ನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಚಿತ್ರದ ಸಂಗೀತವನ್ನು ಥಮನ್ ಸಂಯೋಜಿಸಿದ್ದು, ಪೂರ್ಣ ಹಾಡು ಡಿಸೆಂಬರ್ 21, 2024 ರಂದು ಸಂಜೆ 9 ಗಂಟೆಗೆ ಯುಎಸ್‌ನ ಡಲ್ಲಾಸ್‌ನಲ್ಲಿ ಬಿಡುಗಡೆಯಾಗಲಿದೆ.
‘ಗೇಮ್ ಚೇಂಜರ್’ ಚಿತ್ರದಲ್ಲಿ ರಾಮ್‌ಚರಣ್, ರಾಜಕೀಯ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರವನ್ನು ಎದುರಿಸುವ IAS ಅಧಿಕಾರಿಯಾಗಿದ್ದಾರೆ. ಅಲ್ಲದೆ, ಕಿಯಾರಾ ಅಡ್ವಾಣಿ ಕೂಡ IAS ಅಧಿಕಾರಿಯಾಗಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
Can’t get enough of their energy!! Global Star @AlwaysRamCharan and @advani_kiara in their most electrifying avatars for #DHOP 💥
See you with an electrifying beat on 22nd December 😎❤️
A @MusicThaman Musical 🎶
Lyrics “SaraswathiPuthra” @ramjowrites… pic.twitter.com/O3T6mhDANZ
— Game Changer (@GameChangerOffl) December 18, 2024