ಅಕ್ಕಿ ಹಿಟ್ಟು ಬಳಸಿ ನಾನಾಬಗೆಯ ತಿಂಡಿಗಳನ್ನು ಮಾಡುತ್ತೇವೆ. ಇದನ್ನು ಹೊರಗಡೆ ತಂದು ಉಪಯೋಗಿಸುವುದಕ್ಕಿಂತ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.
2 ಕಪ್ ನಷ್ಟು ಅಕ್ಕಿಯನ್ನು ತೆಗೆದುಕೊಂಡು ತೊಳೆದು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಇದರ ನೀರು ಬಸಿದುಕೊಂಡು ಮತ್ತೊಮ್ಮೆ ಅಕ್ಕಿಯನ್ನು ತೊಳೆದುಕೊಳ್ಳಿ. ಒಂದು ತೆಳುವಾದ ಬಿಳಿ ಕಾಟನ್ ಬಟ್ಟೆಯನ್ನು ಹಾಸಿ ನೆರಳಿನಲ್ಲಿ 45 ನಿಮಿಷಗಳ ಕಾಲ ಒಣಗಿಸಿ. ಇದು ಪೂರ್ತಿಯಾಗಿ ಒಣಗುವುದು ಬೇಡ. ಕೈಗೆ ಅಕ್ಕಿ ಕಾಳುಗಳು ತುಸು ಅಂಟಿಕೊಂಡು ಕೆಳಗೆ ಬೀಳುವ ರೀತಿ ಇರಲಿ. ಇದರಲ್ಲಿ ಸ್ವಲ್ಪ ಮಟ್ಟಿನ ತೇವಾಂಶ ಇರಬೇಕು.
ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ನಯವಾಗಿ ಪುಡಿಮಾಡಿಕೊಂಡು ಜರಡಿ ಹಿಡಿದುಕೊಂಡರೆ ನಯವಾದ ಅಕ್ಕಿ ಹಿಟ್ಟು ಮನೆಯಲ್ಲಿಯೇ ಸಿದ್ಧವಾಗುತ್ತದೆ.