ಬಿಸಿಬಿಸಿ ʼಆಲೂ‌-ಎಗ್ʼ ಕರಿ ಮಾಡಿ ಸವಿಯಿರಿ

ದಿನಕ್ಕೊಂದು ಮೊಟ್ಟೆ ತಿನ್ನಬೇಕೆಂದು ಬಲ್ಲವರು ಹೇಳುತ್ತಾರೆ. ಮೊಟ್ಟೆಯನ್ನು ಬಳಸಿ ಮಾಡುವ ಅಡುಗೆ ಅನೇಕರಿಗೆ ಇಷ್ಟವಾಗುತ್ತದೆ.

ಮೊಟ್ಟೆಯಿಂದ ವಿವಿಧ ಬಗೆಯ ಅಡುಗೆ ಮಾಡಬಹುದಾಗಿದೆ. ಅದರಲ್ಲಿ ಮೊಟ್ಟೆ ಆಲೂ ಕರಿ ಮಾಡುವ ಕುರಿತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬೇಕಾಗುವ ಸಾಮಗ್ರಿಗಳು:

8-ಮೊಟ್ಟೆಗಳು, 6-ಈರುಳ್ಳಿ, 2 ಕಪ್-ಗಟ್ಟಿಯಾದ ತೆಂಗಿನ ಹಾಲು, 1 ಚಮಚ-ಅರಿಶಿನ, 6- ಹಸಿಮೆಣಸಿನ ಕಾಯಿ, 1 ಚಮಚ- ಮೆಣಸಿನ ಕಾಯಿ ಪುಡಿ, ಕರಿಬೇವು, ಕೊತಂಬರಿ ಸೊಪ್ಪು ಹಾಗೂ ಉಪ್ಪು ಅಗತ್ಯವಿರುವಷ್ಟು., ½ ಕೆ.ಜಿ. ಆಲೂಗಡ್ಡೆ, 4 ಕಪ್- ತೆಳು ತೆಂಗಿನ ಹಾಲು, ಶುಂಠಿ, 1 -ಬೆಳ್ಳುಳ್ಳಿ, ½ ಚಮಚ -ಮೆಂತ್ಯ ಕಾಳು, 2 ಚಮಚ- ಗರಂ ಮಸಾಲಾ

ತಯಾರಿಸುವ ವಿಧಾನ:

ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿಕೊಳ್ಳಿ. ಶುಂಠಿ, ಬೆಳ್ಳುಳ್ಳಿಯನ್ನು ಜಜ್ಜಿ, ಆಲೂಗಡ್ಡೆ ಸಿಪ್ಪೆ ತೆಗೆದು ಕತ್ತರಿಸಿಕೊಳ್ಳಿ. ಮೊಟ್ಟೆ ಬೇಯಿಸಿಕೊಂಡು ಮೇಲಿನ ಸಿಪ್ಪೆ ತೆಗೆಯಿರಿ.

4 ಚಮಚ ಎಣ್ಣೆಯನ್ನು ಕಾಯಿಸಿ ಮೆಂತ್ಯಕಾಳು ಹಾಕಿ ಕೆಂಪಾದ ಬಳಿಕ ಕತ್ತರಿಸಿದ ಈರುಳ್ಳಿ ಹಾಕಿ. ಜಜ್ಜಿದ ಶುಂಠಿ, ಬೆಳ್ಳುಳ್ಳಿಯನ್ನು ಹಾಕಿ ಹುರಿಯಿರಿ.

ಮೆಣಸಿನ ಪುಡಿ, ಗರಂ ಮಸಾಲೆ ಹಾಕಿ ಕತ್ತರಿಸಿಟ್ಟುಕೊಂಡಿದ್ದ ಆಲೂಗಡ್ಡೆಯನ್ನು ಹಾಕಿ 5 ನಿಮಿಷ ಹುರಿಯಿರಿ. ಬಳಿಕ ತೆಳುವಾದ ತೆಂಗಿನ ಹಾಲನ್ನು  ಹಾಕಿರಿ.

ಜೊತೆಗೆ ಕರಿಬೇವು ಹಾಕಿ ಕುದಿಸಿ, ಆಲೂಗಡ್ಡೆ ಚೆನ್ನಾಗಿ ಬೆಂದ ಬಳಿಕ ಗಟ್ಟಿಯಾದ ತೆಂಗಿನ ಹಾಲನ್ನು ಹಾಕಿರಿ.

ಒಂದು ಕುದಿ ಬಂದ ನಂತರ ಉರಿ ಕಡಿಮೆ ಮಾಡಿ. ಮೊಟ್ಟೆಯನ್ನು ಅರ್ಧ ಭಾಗ ಮಾಡಿ ಹಾಕಿರಿ. 5 ನಿಮಿಷದ ಬಳಿಕ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿರಿ. ನಂತರ ರುಚಿ ಸವಿಯಿರಿ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read