ದೀಪಾವಳಿಯಲ್ಲಿ ಮಾರುಕಟ್ಟೆಯಿಂದ ಸ್ವೀಟ್ ತಂದು ತಿನ್ನೋದಕ್ಕಿಂತ ಮನೆಯಲ್ಲಿಯೇ ಸ್ವೀಟ್ ಮಾಡಿದ್ರೆ ಅದ್ರ ರುಚಿ ದುಪ್ಪಟ್ಟಾಗುತ್ತದೆ.
ಈ ಬಾರಿ ದೀಪಾವಳಿಗೆ ಯಾವ ಸ್ವೀಟ್ ಮಾಡೋದು ಎನ್ನುವ ಚಿಂತೆಯಲ್ಲಿದ್ದರೆ ಕೋಕಾನಟ್ ರೈಸ್ ಲಡ್ಡು ತಯಾರಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿ.
ಕೋಕಾನಟ್ ರೈಸ್ ಲಡ್ಡು ಮಾಡಲು ಬೇಕಾಗುವ ಪದಾರ್ಥ:
ತುರಿದ ತೆಂಗಿನಕಾಯಿ -1/2 ಕಪ್
ಅನ್ನ -1/2 ಕಪ್
ತುಪ್ಪ – 2 ಚಮಚ
ಒಣ ಹಣ್ಣು -1/4 ಕಪ್
ತುರಿದ ಕುಂಬಳಕಾಯಿ -1 ಕಪ್
ಏಲಕ್ಕಿ ಪುಡಿ – 1/2 ಚಮಚ
ಮಂದಗೊಳಿಸಿದ ಹಾಲು – 1/2 ಕಪ್
ಒಣ ತೆಂಗಿನಕಾಯಿ ತುರಿ ಅಲಂಕಾರಕ್ಕೆ
ಕೋಕಾನಟ್ ರೈಸ್ ಲಡ್ಡು ಮಾಡುವ ವಿಧಾನ :
ಒಂದು ಪಾತ್ರೆಗೆ ತುಪ್ಪ ಹಾಕಿ ಅದಕ್ಕೆ ಒಣ ಹಣ್ಣುಗಳನ್ನು ಹಾಕಿ. ನಂತ್ರ ಕುಂಬಳಕಾಯಿ ತುರಿಯನ್ನು ಹಾಕಿ 15 ನಿಮಿಷ ಬೇಯಿಸಿ. ನಂತ್ರ ಏಲಕ್ಕಿ ಪುಡಿ, ಅನ್ನ, ತೆಂಗಿನ ತುರಿ ಹಾಕಿ ಸ್ವಲ್ಪಹೊತ್ತು ಬೇಯಿಸಿ. ಇದಕ್ಕೆ ಹಾಲನ್ನು ಹಾಕಿ ದಪ್ಪಗಾಗುವವರೆಗೆ ಮಂದ ಉರಿಯಲ್ಲಿ ಕೈ ಆಡಿಸಿ.
ಮಿಶ್ರಣ ದಪ್ಪಗಾದ ಮೇಲೆ ಗ್ಯಾಸ್ ಆರಿಸಿ ತಣ್ಣಗಾಗಲು ಬಿಡಿ. ನಂತ್ರ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳ ಆಕಾರ ಮಾಡಿ. ನಂತ್ರ ಒಣ ತೆಂಗಿನಕಾಯಿ ತುರಿಯಲ್ಲಿ ಲಾಡನ್ನು ಹೊರಳಿಸಿ. ಕೋಕಾನಟ್ ರೈಸ್ ಲಡ್ಡು ಸವಿಯಲು ಸಿದ್ಧ.