ಹೊಸಪೇಟೆ: ಅಂಬಲಿ ಹಳಸಿತು ಕಂಬಳಿ ಬೀಸಿತಲೆ ಪರಾಕ್ ಎಂದು ಮೈಲಾರ ಕ್ಷೇತ್ರದಲ್ಲಿ ಗೊರವಯ್ಯ ಕಾರಣಿಕ ನುಡಿದಿದ್ದಾರೆ.
ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಮೈಲಾರ ಕ್ಷೇತ್ರದಲ್ಲಿ ಗೊರವಪ್ಪ ವರ್ಷದ ಭವಿಷ್ಯವಾಣಿ ಎಂದೇ ಹೇಳಲಾಗುವ ಕಾರಣಿಕ ನುಡಿದಿದ್ದಾರೆ.
ಅಂಬಲಿ ಹಳಸಿತು ಕಂಬಳಿ ಬೀಸಿತಲೆ ಪರಾಕ್ ಎಂದು ಮೈಲಾರ ಕ್ಷೇತ್ರದ ಗೊರವಯ್ಯ ರಾಮಪ್ಪ ಕಾರಣಿಕ ನುಡಿದಿದ್ದಾರೆ. ಪ್ರಾಮಾಣಿಕ, ನಿಷ್ಠೆಯಿಂದ ಇರುವ ವ್ಯಕ್ತಿ ರಾಜ್ಯ, ರಾಷ್ಟ್ರವನ್ನು ಆಳುತ್ತಾನೆ ಎಂದು ಡೆಂಕಣಮರಡಿಯಲ್ಲಿ ದೇವಾಲಯದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಕಾರಣಿಕವನ್ನು ವಿಶ್ಲೇಷಿಸಿದ್ದಾರೆ.
ಶ್ರೀ ಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಗೊರವಯ್ಯ ರಾಮಪ್ಪ ಕಾರಣಿಕ ನುಡಿದಿದ್ದಾರೆ. ಕಾರಣಿಕವನ್ನು ವರ್ಷದ ಭವಿಷ್ಯವಾಣಿ ಎಂದು ಕರೆಯಲಾಗುತ್ತದೆ.