
ಶಿವಸೇನಾ (ಯುಬಿಟಿ) ವಕ್ತಾರರಾದ ಸುಷ್ಮಾ ಅಂಧಾರೆ ಘಟನೆಯ ಸಿಸಿಟಿವಿ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಬಿಜೆಪಿ ಮುಖಂಡರ ಕೃತ್ಯವನ್ನು ಖಂಡಿಸಿದ್ದಾರೆ. ಹಲ್ಲೆ ಮಾಡಿರುವ ಸ್ಥಳೀಯ ಬಿಜೆಪಿ ನಾಯಕ ಶಿವ ತಾಯ್ಡೆ ಎಂದು ಗೊತ್ತಾಗಿದ್ದು ಅವರು ಮಲ್ಕಾಪುರ ಕೃಷಿ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ.
ಸುಷ್ಮಾ ಅಂಧಾರೆ ಹಂಚಿಕೊಂಡ ವೀಡಿಯೊದಲ್ಲಿ, ಠಾಣೆಯೊಳಗೆ ಬೆಂಚಿನ ಮೇಲೆ ಕುಳಿತಿದ್ದ ಮಹಿಳೆಗೆ ಬಿಜೆಪಿ ನಾಯಕ ಶಿವ ತಾಯ್ಡೆ ಕಪಾಳಮೋಕ್ಷ ಮಾಡುತ್ತಾರೆ. ಪೊಲೀಸ್ ಅಧಿಕಾರಿಗಳು ಅವರನ್ನು ತಡೆಯುವವರೆಗೂ ಮಹಿಳೆಯನ್ನು ಥಳಿಸುತ್ತಲೇ ಇರುತ್ತಾರೆ.
ನಂತರ, ಮಧ್ಯವಯಸ್ಕ ಮಹಿಳೆ ಕೂಡ ಬಿಜೆಪಿ ನಾಯಕನನ್ನು ಹಿಂಸೆಯಿಂದ ತಡೆಯಲು ಪ್ರಯತ್ನಿಸುತ್ತಾಳೆ. ಬಿಜೆಪಿ ನಾಯಕ ಮತ್ತು ಮಹಿಳೆ, ಪೊಲೀಸ್ ಅಧಿಕಾರಿಯ ಮುಂದೆ ಕುಳಿತು ಏರು ಧ್ವನಿಯಲ್ಲಿ ಯಾವುದೋ ವಿಷಯವನ್ನು ಚರ್ಚಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಆಗ ಬಿಜೆಪಿ ನಾಯಕ ಸಿಟ್ಟಿನಿಂದ ಎದ್ದು ಬರುತ್ತಾನೆ. ನಿಜವಾಗಿ ವಿಷಯ ಏನೆಂಬುದು ಹಾಗು ಮಹಿಳೆ ಮತ್ತು ಬಿಜೆಪಿ ನಾಯಕ ಪೊಲೀಸ್ ಠಾಣೆಗೆ ಏಕೆ ಬಂದರು ಎಂಬುದು ಗೊತ್ತಾಗಿಲ್ಲ.
ಸುಷ್ಮಾ ಅಂಧಾರೆ ಅವರು ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವ ದೇವೇಂದ್ರ ಫಡ್ನವಿಸ್ ಅವರನ್ನು ಗುರಿಯಾಗಿಟ್ಟುಕೊಂಡು ವಿಡಿಯೋ ಮೂಲಕ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯ ಬಗ್ಗೆ ಲೇವಡಿ ಮಾಡಿದ್ದಾರೆ.