ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ 23 ವರ್ಷದ ಯುವಕನೊಬ್ಬ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದಾನೆ.
ಗಡ್ಚಿರೋಲಿಯ ಅರಣ್ಯದಲ್ಲಿ ಗುರುವಾರ ಈ ಘಟನೆ ನಡೆದಿದೆ. ಚಂದ್ರಾಪುರ ಜಿಲ್ಲೆಯ ನವೇಗಾಂವ್‌ನ ಶಶಿಕಾಂತ್ ರಾಮಚಂದ್ರ ಸಾತ್ರೆ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಶಶಿಕಾಂತ್ ಅರಣ್ಯ ವಿಭಾಗದಲ್ಲಿ ಕೇಬಲ್ ಹಾಕುವ ಕೆಲಸಕ್ಕಾಗಿ ಸಹೋದ್ಯೋಗಿಗಳೊಂದಿಗೆ ಗಡ್‌ಚಿರೋಲಿಗೆ ಹೋಗಿದ್ದ.
ಅಕ್ಟೋಬರ್ 23 ರಂದು ಚಟಗಾಂವ್-ಗಡ್ಚಿರೋಲಿ ಅರಣ್ಯ ಪ್ರದೇಶದಿಂದ ಕಾಡಾನೆಯೊಂದು ಕುಂಘಡ ರೈ ಪ್ರದೇಶಕ್ಕೆ ಪ್ರವೇಶಿಸಿತ್ತು. ಸಮೀಪದಲ್ಲಿ ಕಾಡಾನೆ ಇರುವ ಬಗ್ಗೆ ಸ್ಥಳೀಯರು ಎಚ್ಚರಿಕೆ ನೀಡಿದರೂ, ಶಶಿಕಾಂತ್ ಮತ್ತು ಇತರ ಇಬ್ಬರು ಅದನ್ನು ನೋಡಲು ಗುರುವಾರ ತೆರಳಿದ್ದರು. ಆನೆ ನೋಡಿದ ಶಶಿಕಾಂತ್ ದೂರದಿಂದ ಸೆಲ್ಫಿ ತೆಗೆಯಲು ಯತ್ನಿಸುತ್ತಿದ್ದಾಗ ಏಕಾಏಕಿ ದಾಳಿ ಮಾಡಿ ತುಳಿದು ಕೊಂದು ಹಾಕಿದೆ. ಇನ್ನಿಬ್ಬರು ಕಾರ್ಮಿಕರು ಅಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ.