ಮುಂಬೈ: ನ್ಯಾಯಾಂಗದ ಮೇಲಿನ ಹೊರೆಯನ್ನು ಗಣನೀಯವಾಗಿ ತಗ್ಗಿಸಿ, ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಸುಮಾರು ಐದು ಲಕ್ಷ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ
ಮೂರನೇ ರಾಷ್ಟ್ರೀಯ ಲೋಕ ಅದಾಲತ್ ಅನ್ನು ಮಹಾರಾಷ್ಟ್ರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಮುಂಬೈ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಅಡಿಯಲ್ಲಿ ನಡೆಸಿತು. ಮೂರು ಹೈಕೋರ್ಟ್ ಕಾನೂನು ಸೇವಾ ಸಮಿತಿ ಅಥವಾ ಉಪಸಮಿತಿಗಳು, 33 ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳು ಮತ್ತು ತಾಲೂಕಾ ಕಾನೂನು ಸೇವಾ ಸಮಿತಿಗಳಲ್ಲಿ ಲೋಕ-ಅದಾಲತ್ ಆಯೋಜಿಸಲಾಗಿದೆ.
ವ್ಯಾಜ್ಯ ಪೂರ್ವ ಮತ್ತು ಬಾಕಿ ಇರುವ ಪ್ರಕರಣಗಳು ಸೇರಿದಂತೆ ಒಟ್ಟು 4,97,271 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಶನಿವಾರದಂದು 1,18,108 ಪ್ರಕರಣಗಳು ವಿಲೇವಾರಿಯಾಗಿ ಒಟ್ಟು 1,75,537 ಬಾಕಿ ಉಳಿದಿರುವ ಪ್ರಕರಣಗಳು ಮತ್ತು 57,429 ಬಾಕಿ ಉಳಿದಿರುವ ಪ್ರಕರಣಗಳನ್ನು ಲೋಕ ಅದಾಲತ್ ದಿನದ ಮೊದಲು 5 ದಿನಗಳ ಕಾಲ ಎಲ್ಲಾ ನ್ಯಾಯಾಲಯಗಳು ಕೈಗೊಂಡ ವಿಶೇಷ ಡ್ರೈವ್‌ನಲ್ಲಿ ವಿಲೇವಾರಿ ಮಾಡಲಾಗಿದೆ.
ಮೋಟಾರು ಅಪಘಾತ ಕ್ಲೈಮ್ಸ್ ಟ್ರಿಬ್ಯೂನಲ್, ವೈವಾಹಿಕ, ಚೆಕ್ ಬೌನ್ಸ್ ಪ್ರಕರಣಗಳು ಮತ್ತು ಇತರ ಸಿವಿಲ್ ಪ್ರಕರಣಗಳು ವಿಲೇವಾರಿ ಮಾಡಲಾದ ಕೇಸ್ ಗಳಾಗಿವೆ. ಮುಂಬೈನಲ್ಲಿ ಇತ್ಯರ್ಥವಾದ ಪ್ರಕರಣಗಳಲ್ಲಿ 2.32 ಕೋಟಿ ರೂ. ಔರಂಗಾಬಾದ್‌ನ ಎಂಎಸಿಟಿಯಲ್ಲಿ 1.05 ಕೋಟಿ ರೂ.ಗೆ ಇತ್ಯರ್ಥವಾಯಿತು.
ಪುಣೆ ಮೂಲದ ದಂಪತಿಗಳು 20 ವರ್ಷಗಳ ವ್ಯಾಜ್ಯದ ನಂತರ ತಮ್ಮ ವಿವಾದವನ್ನು ಬಗೆಹರಿಸಿಕೊಂಡರು. ಹಾಗೂ ಶಾಂತಿಯುತವಾಗಿ ಒಟ್ಟಿಗೆ ವಾಸಿಸಲು ನಿರ್ಧರಿಸಿದರು. ಲೋಕ ಅದಾಲತ್‌ನಲ್ಲಿ ಇತ್ಯರ್ಥವಾದ 424ಕ್ಕೂ ಹೆಚ್ಚು ವೈವಾಹಿಕ ವಿವಾದಗಳಲ್ಲಿ, ಕಕ್ಷಿದಾರರು ಶಾಂತಿಯುತವಾಗಿ ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದಾರೆ.