Shocking News : ಮಹಾರಾಷ್ಟ್ರದಲ್ಲಿ ಘೋರ ದುರಂತ : ಆಸ್ಪತ್ರೆಯಲ್ಲಿ ಔಷಧ ಸಿಗದೇ ಮಕ್ಕಳೂ ಸೇರಿ 24 ಮಂದಿ ಸಾವು!

ಮುಂಬೈ : ಔಷಧ ಕೊರತೆಯಿಂದ ಕೇವಲ 24 ಗಂಟೆಯಲ್ಲಿ 12 ನವಜಾತ ಶಿಶುಗಳು ಸೇರಿದಂತೆ 24 ರೋಗಿಗಳು ಮೃತಪಟ್ಟಿರುವ ಘಠನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ನಾಂದೇಡ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಡಾ.ಶ್ಯಾಮರಾವ್ ವಾಕೋಡೆ ಮಾತನಾಡಿ, ಕಳೆದ 24 ಗಂಟೆಗಳಲ್ಲಿ ಸುಮಾರು 12 ಮಕ್ಕಳು ಸಾವನ್ನಪ್ಪಿದ್ದಾರೆ. 12 ವಯಸ್ಕರು ವಿವಿಧ ಕಾಯಿಲೆಗಳಿಂದ (ಹಾವು ಕಡಿತ, ಆರ್ಸೆನಿಕ್ ಮತ್ತು ರಂಜಕ ವಿಷ ಇತ್ಯಾದಿ) ಸಾವನ್ನಪ್ಪಿದ್ದಾರೆ. ವಿವಿಧ ಸಿಬ್ಬಂದಿಯ ವರ್ಗಾವಣೆಯಿಂದಾಗಿ, ನಮಗೆ ಸ್ವಲ್ಪ ತೊಂದರೆ ಇತ್ತು ಎಂದು ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಕೊರತೆಯಿಂದಾಗಿ 24 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯ ಸರ್ಕಾರದ ಅಸಮರ್ಪಕ ಆಡಳಿತದ ವ್ಯವಸ್ಥೆಯಿಂದ ಆಸ್ಪತ್ರೆಗಳಲ್ಲಿ ಔಷಧಕ್ಕೂ ಬರ ಬಂದಿದೆ. ಸಿಎಂ ಏಕನಾಥ್ ಶಿಂಧೆ ಸರ್ಕಾರದ ನಿರ್ಲಕ್ಷ್ಯಕ್ಕೆ 24 ಮಂದಿ ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಕಾಂಗ್ರೆಸ್ ನಾಯಕ ವಿಕಾಸ್ ಲಾವಂಡೆ ಆರೋಪಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read