ರಿವಾಲ್ವರ್ ಹಿಡಿದು ಇನ್​ಸ್ಟಾದಲ್ಲಿ ಪೋಸ್ಟ್​: ವಿಚಾರಣೆ ವೇಳೆ ಶಾಕಿಂಗ್‌ ಸಂಗತಿ ಬಹಿರಂಗ

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ರಿವಾಲ್ವರ್ ಮತ್ತು ಚಾಕುವನ್ನು ಹೊಂದಿರುವ ಹಲವಾರು ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಕ್ಕಾಗಿ ಮಧ್ಯಪ್ರದೇಶ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.

ಸೋನಿಯಾ ಎಂಬ 19 ವರ್ಷದ ಯುವತಿ ಈಗ ಬಂಧನಕ್ಕೆ ಒಳಗಾಗಿದ್ದಾಳೆ. ಈಕೆ ಹರಿತವಾದ ಚಾಕುವಿನಿಂದ ಬೆದರಿಕೆ ಹಾಕುತ್ತಿದ್ದಾಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಪೊಲೀಸರು ಆಕೆಯನ್ನು ಬಂಧಿಸಿ ಚಾಕು ವಶಪಡಿಸಿಕೊಂಡಿದ್ದಾರೆ.

ಸೋನಿಯಾ ಕುತ್ತಿಗೆಗೆ ಸ್ಕಾರ್ಫ್ ಸುತ್ತಿಕೊಂಡು ರಿವಾಲ್ವರ್ ಮತ್ತು ಚಾಕುಗಳನ್ನು ಹಿಡಿದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಳು. ಪನ್ವಾಸಾ ಪೊಲೀಸ್ ಠಾಣೆಯ ಉಸ್ತುವಾರಿ ಗಜೇಂದ್ರ ಪಚೋರಿಯಾ ಪ್ರಕಾರ, ಸೋನಿಯಾ ಈ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಜನರನ್ನು ಬೆದರಿಸಲು ಪ್ರಯತ್ನಿಸುತ್ತಿದ್ದಳು. ತನಿಖೆಯ ವೇಳೆ ಆಕೆ ಮಾದಕ ವ್ಯಸನಿ ಎಂಬುದು ಕೂಡ ಬೆಳಕಿಗೆ ಬಂದಿದೆ.

ಅವಳು ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಪನ್ವಾಸಾದಲ್ಲಿ ವಾಸಿಸುತ್ತಾಳೆ. ಆಕೆಯೊಂದಿಗೆ ಬೇರೊಬ್ಬರು ಸಂಪರ್ಕದಲ್ಲಿದ್ದಾರೆ ಎಂಬುದು ಈಗ ನಮ್ಮ ಗಮನಕ್ಕೆ ಬಂದಿದೆ ಎಂದು ಗಜೇಂದ್ರ ಪಚೋರಿಯಾ ಹೇಳಿದ್ದಾರೆ. ತನಿಖೆ ನಡೆಯುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read