![](https://kannadadunia.com/wp-content/uploads/2024/02/eda5ffda-a3e7-407e-8ffe-947ce3f1ed86-1024x572.jpg)
ನವೀನ್ ರೆಡ್ಡಿ ನಿರ್ದೇಶನದ ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ‘ಮಾದೇವ’ ಚಿತ್ರ ಮಲಯಾಳಂ ಭಾಷೆಯಲ್ಲೂ ಬಿಡುಗಡೆಯಾಗಲಿದ್ದು, ಇಂದು ಮಲಯಾಳಂ ಟೀಸರ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಈ ಟೀಸರ್ ಕೆಲವೇ ನಿಮಿಷದಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ.
ಈ ಚಿತ್ರವನ್ನು ರಾಧಾಕೃಷ್ಣ ಪಿಚ್ಚರ್ಸ್ ಬ್ಯಾನರ್ ನಲ್ಲಿ ಆರ್. ಕೇಶವ ನಿರ್ಮಾಣ ಮಾಡಿದ್ದು, ವಿನೋದ್ ಪ್ರಭಾಕರ್ ಗೆ ಜೋಡಿಯಾಗಿ ಸೋನಾಲ್ ಮೊಂಟೆರೊ ಅಭಿನಯಿಸಿದ್ದಾರೆ.
ಶ್ರೀನಗರ ಕಿಟ್ಟಿ, ಶೃತಿ, ಮಾಲಾಶ್ರೀ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧೀರ್, ಚೈತ್ರ, ಬಾಲರಾಜ್ವಾಡಿ, ಮುನಿರಾಜು ಸೇರಿದಂತೆ ಹಲವರ ತಾರಾ ಬಳಗವಿದೆ. ವಿಜಯ್ ಕುಮಾರ್ ಸಂಕಲನ, ಬಾಲಕೃಷ್ಣ ತೋಟ ಛಾಯಾಗ್ರಹಣವಿದೆ.