ವಿಶ್ವನಾಥ್ ನಿರ್ದೇಶನದ ಶಶಿಕಾಂತ್ ಅಭಿನಯದ ‘ತಂತ್ರ’ ಚಿತ್ರದ ‘ಜಾತ್ರಿ ಹೊಂಟೈತಿ ಹುಡುಗಿ’ ಎಂಬ ಲಿರಿಕಲ್ ಹಾಡೊಂದನ್ನು ಇಂದು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದೆ. ಮಾಲು ನಿಪನಾಳ ಮತ್ತು ಪ್ರಣತಿ ರಾವ್ ಈ ಹಾಡಿಗೆ ಧ್ವನಿಗೂಡಿಸಿದ್ದು ವಿಶ್ವನಾಥ್ ಸಾಹಿತ್ಯ ಬರೆದಿದ್ದಾರೆ.
ಈ ಚಿತ್ರವನ್ನು ಸಿಲ್ವರ್ ಸ್ಕೈ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಶಶಿಕಾಂತ್ ಪಿ ನಿರ್ಮಾಣ ಮಾಡಿದ್ದು, ಶಶಿಕಾಂತ್ ಸೇರಿದಂತೆ ವಿಕ್ರಾಂತ್, ಸೌಜನ್ಯ, ಮೇಘ ಮಲ್ನಾಡ್, ಅಮೋಘ ದಾಸ್, ಸಾಮ್ರಾಟ್, ಪಾರು ದಾವಣಗೆರೆ, ಸಂತೋಷ್ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ರಮೇಶ್ ಕೃಷ್ಣನ್ ಮತ್ತು ರೋಹನ್ ದೇಸಾಯಿ ಸಂಗೀತ ಸಂಯೋಜನೆ ನೀಡಿದ್ದು, ಸರ್ವಣನ್ ಸಂಕಲನ, ರೋಹನ್ ದೇಸಾಯಿ ಮತ್ತು ವರ್ಧನ್ ಛಾಯಗ್ರಹಣವಿದೆ.