ನವದೆಹಲಿ: ದೀಪಾವಳಿ ಲಕ್ಷ್ಮಿ ಪೂಜೆಯ ದಿನದಂದು ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 61 ರಿಂದ 62 ರೂ.ನಷ್ಟು ಹೆಚ್ಚಿಸಿವೆ.
ಹೊಸ ದರಗಳು ನವೆಂಬರ್ 1, 2024 ರಿಂದ ಜಾರಿಗೆ ಬಂದಿವೆ. ಇಡೀ ತಿಂಗಳು ದರ ಮುಂದುವರಿಯುತ್ತದೆ. LPG ಬೆಲೆಗಳನ್ನು ಮಾಸಿಕ ಆಧಾರದ ಮೇಲೆ ಪರಿಷ್ಕರಿಸಲಾಗುತ್ತದೆ. ಗೃಹಬಳಕೆಯ 14.2 ಕೆಜಿ ಸಿಲಿಂಡರ್‌ಗಳ LPG ಬೆಲೆಗಳು ಆಗಸ್ಟ್ 2024 ರಿಂದ ಬದಲಾಗದೆ ಉಳಿದಿವೆ. ಇದರ ಹೊರತಾಗಿ, ಪ್ರಮುಖ OMC ತನ್ನ ಜೆಟ್ ಇಂಧನ ಬೆಲೆಗಳನ್ನು ಪರಿಷ್ಕರಿಸಿದೆ.
ಅತಿ ದೊಡ್ಡ OMC ಇಂಡಿಯನ್ ಆಯಿಲ್ ಕಾರ್ಪೊರೇಷನ್ 19ಕೆಜಿ LPG ಸಿಲಿಂಡರ್ ದರವನ್ನು ಹೆಚ್ಚಿಸಿದೆ. ಮುಂಬೈ ಮತ್ತು ದೆಹಲಿಯಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿದೆ. ಚೆನ್ನೈ ಮತ್ತು ಕೋಲ್ಕತ್ತಾದಲ್ಲೂ ದರ ಹೆಚ್ಚಾಗಿದೆ. ಕೋಲ್ಕತ್ತಾದಲ್ಲಿ ಎಲ್‌ಪಿಜಿ ದರ 19 ಕೆಜಿ ಸಿಲಿಂಡರ್‌ಗೆ 1,900 ರೂ. ದಾಟಿದೆ.
ದೆಹಲಿಯಲ್ಲಿ ನವೆಂಬರ್ 1 ರಿಂದ 19 ಕೆಜಿ ಸಿಲಿಂಡರ್‌ಗೆ ಎಲ್‌ಪಿಜಿ ಬೆಲೆ 62 ರೂ. ಹೆಚ್ಚಾಗಿ 1,802 ರೂ.ಗೆ ಏರಿಕೆಯಾಗಿದೆ.
14.2 ಕೆಜಿ ಪ್ರತಿ ಸಿಲಿಂಡರ್ ದರ ಬದಲಾಗಿಲ್ಲ. ಆಗಸ್ಟ್ 1, 2024 ರಿಂದ 14.2 ಕೆಜಿ ಎಲ್‌ಪಿಜಿ ಬೆಲೆ ಬದಲಾಗದೆ ಉಳಿದಿದೆ. ದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಪ್ರತಿ ಸಿಲಿಂಡರ್‌ಗೆ 803 ರೂ. ಇದೆ.