ಹುಬ್ಬಳ್ಳಿ: ಲವ್ ಜಿಹಾದ್ ವಿರುದ್ಧ ಅಭಿಯಾನ ಆರಂಭಿಸಿರುವ ಶ್ರೀರಾಮಸೇನೆ ಹೆಲ್ಪ್ ಲೈನ್ ಆರಂಭವಿಸಿದೆ. ಈ ಹೆಲ್ಪ್ ಲೈನ್ ಸಂಖ್ಯೆಗೆ ಬೆದರಿಕೆ ಕರೆಗಳು ಹೆಚ್ಚುತ್ತಿವೆ ಎಂದು ಶ್ರೀರಾಮಸೇನೆ ಮುಖಂಡ ಗಂಗಾಧರ ಕುಲಕರ್ಣಿ ತಿಳಿಸಿದ್ದಾರೆ.
ಶ್ರೀರಾಮಸೇನೆ ಮೇಲೆ ಬಾಂಬ್ ಹಾಕುವುದಾಗಿ, ಕೊಲೆ ಬೆದರಿಕೆಗಳು ಬರುತ್ತಿವೆ. ಕಿಡಿಗೇಡಿಗಳು ಇಂಟರ್ ನೆಟ್ ಕಾಲ್ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
ಮೇ 29ರಂದು ಶ್ರೀರಾಮಸೇನೆ ಲವ್ ಜಿಹಾದ್ ವಿರುದ್ಧ ಅಭಿಯಾನ ನಿಟ್ಟಿನಲ್ಲಿ ಹೆಲ್ಪ್ ಲೈನ್ ಆರಂಭಿಸಿದೆ. ಸಹಾಯವಾಣಿಗೆ ಈವರೆಗೆ 1000ಕ್ಕೂ ಹೆಚ್ಚು ಕರೆಗಳು ಬಂದಿವೆ. ಅವುಗಳಲ್ಲಿ 170ಕ್ಕೂ ಅಧಿಕ ಬೆದರಿಕೆ ಕರೆಗಳು ಬಂದಿವೆ. ಶ್ರೀರಾಮಸೇನೆ ಫೇಸ್ ಬುಕ್ ಅಕೌಂಟ್ ನ್ನು ಕ್ಲೋಸ್ ಮಾಡಿದ್ದಾರೆ. ಎಲ್ಲಾ ಪದಾಧಿಕಾರಿಗಳ ಫೇಸ್ ಬುಕ್ ಅಕೌಂಟ್ ಬಂದ್ ಆಗಿದೆ. ಲವ್ ಜಿಹಾದ್ ಅಭಿಯಾನದ ವಿರುದ್ಧ ಈ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ.
ಪ್ರಮೋದ್ ಮುತಾಲಿಕ್, ಸಿದ್ದಲಿಂಗ ಸ್ವಾಮೀಜಿ ಸೇರಿ 18 ಜಿಲ್ಲಾ ಅಧ್ಯಕ್ಷರು ಹಾಗೂ ಎಲ್ಲಾ ಕಾರ್ಯಕರ್ತರ ಫೇಸ್ ಬುಕ್ ಅಕೌಂಟ್ ಬಂದ್ ಆಗಿದೆ. ರಾಜ್ಯದಲ್ಲಿ ಎಮರ್ಜನಿ ವಾತಾವರಣವಿದೆ ನಿರ್ಮಾಣವಾಗಿದೆ ಎಂದು ಕಿಡಿಕಾರಿದ್ದಾರೆ.