ಬೆಳಗಾವಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ನಾಯಕರು ಟಿಕೆಟ್ ಗಾಗಿ ಭಾರಿ ಲಾಭಿ ನಡೆಸುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು, ಶಾಸಕರು, ಮಾಜಿ ಪರಿಷತ್ ಸದಸ್ಯರು ಟಿಕೆಟ್ ಗಾಗಿ ಕಸರತ್ತು ನಡೆಸಿದ್ದಾರೆ.
ಲೋಕಸಭಾ ಚುನವಣೆ ಸ್ಪರ್ಧೆ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿರುವ ಬಿಜೆಪಿ ಮಾಜಿ ಎಂಎಲ್ ಸಿ ಮಹಾಂತೇಶ ಕವಟಗಿಮಠ, ಬೆಳಗಾವಿಯ ಎರಡು ಕ್ಷೇತ್ರಗಳಲ್ಲಿ ಎಲ್ಲಿ ಟಿಕೆಟ್ ನೀಡಿದರೂ ಸ್ಪರ್ಧೆಗೆ ಸಿದ್ಧ ಎಂದು ಹೇಳಿದ್ದಾರೆ.
ಬೆಳಗಾವಿ, ಚಿಕ್ಕೋಡಿ ಎಲ್ಲಿಯಾದರೂ ಸ್ಪರ್ಧೆಗೆ ಸಿದ್ಧನಿದ್ದೇನೆ. ನಾನೇನು ಸನ್ಯಾಸಿಯಲ್ಲ ವಿಧನಪರಿಷತ್ ಚುನಾವಣೆಯಲ್ಲಿ ಸೋತು ಒಂದುವರೆ ವರ್ಷ ಆಯಿತು. ಜನರಿಗೆ ಸಹಾಯ ಮಡಬೇಕು ಎಂದರೆ ರಾಜಕೀಯ ಅಧಿಕಾರ ಅಗತ್ಯ. ವೈಯಕ್ತಿಕವಾಗಿ ನನಗಾಗಿ ಕೇಳುತ್ತಿಲ್ಲ, ಜನರಿಗಾಗಿ ಕೇಳುತ್ತಿದ್ದೇನೆ. ಅಧಿಕಾರವಿದ್ದರೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು ಎಂದರು.
ಪಕ್ಷ ಅವಕಾಶ ಕೊಟ್ಟು ಟಿಕೆಟ್ ಕೊಟ್ಟರೆ ಬೆಳಗಾವಿ, ಚಿಕ್ಕೋಡಿ ಎಲ್ಲಿಂದಲಾದರೂ ಸ್ಪರ್ಧೆಗೆ ಸಿದ್ಧ ಎಂದು ಹೇಳಿದರು.