ಧಾರವಾಡ: ಧಾರವಾಡದಲ್ಲಿ ಸಾಲಗಾರನ ಕಿರುಕುಳದಿಂದ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡ್ಡಿ ದಂಧೆಕೋರ ಆನಂದ ಪಾಸ್ತೆ ವಿರುದ್ಧ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿಂಗರಾಜ್ ಆತ್ಮಹತ್ಯೆ ಮಾಡಿಕೊಂಡವರು. 2018ರಲ್ಲಿ 10 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು. ಕರೆಪ್ಪ ಅವರ ಮೂಲಕ ಆನಂದ ಪಾಸ್ತೆಯಿಂದ ನಿಂಗರಾಜ್ ಸಾಲ ಪಡೆದುಕೊಂಡಿದ್ದರು. ಕರೆಪ್ಪ ಅವರ ಹೆಸರಲ್ಲಿ ಮನೆ ಪತ್ರ ಅಡಿ ಇಟ್ಟು 10 ಲಕ್ಷ ರೂಪಾಯಿ ಸಾಲ ಪಡೆದು 18 ಲಕ್ಷ ರೂಪಾಯಿ ಮರುಪಾವತಿಸಿದ್ದರು.
ಮತ್ತೆ ಮತ್ತೆ ಬಡ್ಡಿ ನೀಡುವಂತೆ ದಂಧೆಕೋರ ಆನಂದ ಪಾಸ್ತೆ ಪೀಡಿಸುತ್ತಿದ್ದ. ಬಡ್ಡಿ ಕೊಡು ಅಥವಾ ಮನೆ ಖಾಲಿ ಮಾಡು ಎಂದು ಆನಂದ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ತನಗೆ ಮೋಸ ಮಾಡಿದವರ ಹೆಸರು ಹೇಳಿ ವಿಡಿಯೋ ಮಾಡಿಟ್ಟು ನಿಂಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.