ಮದುವೆ ಮನೆಯಲ್ಲಿ ಬಾಲೆ ನೃತ್ಯಕ್ಕೆ ನೆಟ್ಟಿಗರು ಫಿದಾ

ಮದುವೆ ಮನೆಗಳಲ್ಲಿ ಈಗ ನೃತ್ಯ, ಸಂಗೀತ ಮಾಮೂಲು. ಅಂಥದ್ದೇ ವಿಡಿಯೋಗಳು ವೈರಲ್​ ಆಗುತ್ತವೆ. ಹರ್ಯಾನ್ವಿ 52 ಗಜ್ ಕಾ ದಮನ್ ಹಾಡಿಗೆ ಪುಟ್ಟ ಹುಡುಗಿ ನೃತ್ಯ ಮಾಡುವ ವಿಡಿಯೋ ವೈರಲ್​ ಆಗಿದ್ದು ನೆಟ್ಟಿಗರು ಫಿದಾ ಆಗಿದ್ದಾರೆ.

ಈ ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಮದುವೆ ಸಮಾರಂಭದಲ್ಲಿ ನೃತ್ಯ ಮಾಡಿದ್ದಾಳೆ. ಆಕೆ ವೇದಿಕೆ ಏರಿ ನೃತ್ಯ ಪ್ರದರ್ಶನ ಮಾಡಲಿಲ್ಲ. ಬದಲಿಗೆ ನಿಂತಲ್ಲೇ ಖುಷಿಯಿಂದ ನೃತ್ಯ ಮಾಡಿದ್ದಾಳೆ. ಇದನ್ನು ಅಲ್ಲಿದ್ದವರು ವಿಡಿಯೋ ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ.

ಈ ವಿಡಿಯೋವನ್ನು 1 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಬಾಲಕಿ ನೃತ್ಯದಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುವುದಕ್ಕೆ ನೆಟ್ಟಿಗರು ಶ್ಲಾಘಿಸಿದ್ದಾರೆ. ಪ್ರತಿಭೆ ಇದ್ದರೆ ವೇದಿಕೆಯೇ ಬೇಕೆಂದು ಇಲ್ಲ. ನಿಂತ ಸ್ಥಳದಲ್ಲಿಯೇ ಪ್ರತಿಭೆ ಪ್ರದರ್ಶನ ಮಾಡಬಹುದು ಎನ್ನುವುದಕ್ಕೆ ಇದು ಸಾಕ್ಷಿ ಎಂದಿದ್ದಾರೆ.

https://youtu.be/b1FO8Al3cLw

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read