ಪ್ರೇಮಿಗಳಾಗಿ ಇದ್ದ ಖುಷಿ, ಸಂತಸ ಮದುವೆಯಾದ ಮೇಲೆ ಇಲ್ಲ. ಅದೇನಿದ್ದರೂ ಜವಾಬ್ದಾರಿ ಮಾತ್ರ ಉಳಿಯುತ್ತದೆ. ಹಾಗಾಗಿ ಮದುವೆಯಾದ ಬಳಿಕ ಒಬ್ಬರಿಗೊಬ್ಬರು ತಮಾಷೆ ಮಾಡಿಕೊಂಡು ನಗುವುದು ಮರೆತೇ ಹೋಗಿದೆ ಎನ್ನುತ್ತೀರಾ.
ಒತ್ತಡ ನಿವಾರಣೆಗೆ ನಗು ಬಹಳ ಮುಖ್ಯ. ನಗುವಿನಿಂದ ಉತ್ತಮ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದರಿಂದ ಸಂಗಾತಿಗಳ ನಡುವಿನ ಒತ್ತಡ ಕಡಿಮೆಯಾಗಿ ಅಲ್ಲಿ ಖುಷಿ ಮನೆ ಮಾಡುತ್ತದೆ.
ನಗುವಿನಿಂದ ನಿಮಗೆ ಒಬ್ಬರನ್ನೊಬ್ಬರು ಹೆಚ್ಚು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಗಂಭೀರ ವಿಷಯಗಳಿಗೂ ಹಾಸ್ಯದ ದೃಷ್ಟಿಯಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂಬುದು ನಿಮಗೆ ಅರಿವಾಗುತ್ತಲೇ ಸಂಸಾರ ಆನಂದ ಸಾಗರವಾಗುತ್ತದೆ. ಹಾಗಾಗಿ ಸಂಗಾತಿಗಳ ಮಧ್ಯೆ ನಗು ಬಹಳ ಮುಖ್ಯ .