300 ವಿಕೆಟ್, 3 ಸಾವಿರ ರನ್ ಕ್ಲಬ್ ಸೇರಿದ ರವೀಂದ್ರ ಜಡೇಜಾ

ಕಾನ್ಪುರ: ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್ ನಲ್ಲಿ 300 ವಿಕೆಟ್ ಪಡೆದ ಆಟಗಾರರ ಕ್ಲಬ್ ಗೆ ಸೇರ್ಪಡೆಯಾಗಿದ್ದಾರೆ.

ಈ ಸಾಧನೆ ಮಾಡಿದ ಭಾರತದ 7ನೇ ಬೌಲರ್ ಅವರಾಗಿದ್ದಾರೆ. ಬಾಂಗ್ಲಾದೇಶ ಎದುರಿನ ಎರಡನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಖಲಿದ್ ಅಹಮದ್ ವಿಕೆಟ್ ಪಡೆದ ಜಡೇಜಾ ಈ ದಾಖಲೆ ಸೃಷ್ಟಿಸಿದ್ದಾರೆ. ಅಲ್ಲದೆ, ಅತಿ ವೇಗವಾಗಿ 3000 ರನ್ ಮತ್ತು 300 ವಿಕೆಟ್ ಪಡೆದ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕಿಂತ ಮೊದಲು ಇಂಗ್ಲೆಂಡ್ ನ ಈ ದಾಖಲೆ ನಿರ್ಮಿಸಿದ್ದಾರೆ.

ಜಡೇಜಾ ಟೆಸ್ಟ್ ಕ್ರಿಕೆಟ್ ನಲ್ಲಿ ಮೂರು ಸಾವಿರ ರನ್ ಮತ್ತು 300 ವಿಕೆಟ್ ಗಳಿಸಿದ ಭಾರತದ ಮೂರನೇ ಹಾಗೂ ವಿಶ್ವದ 11ನೇ ಆಟಗಾರ ಎನಿಸಿಕೊಂಡಿದ್ದಾರೆ.

ಭಾರತದ ಅಶ್ವಿನ್, ಕಪಿಲ್ ದೇವ್, ನ್ಯೂಜಿಲೆಂಡ್ ನ ಹಾಡ್ಲಿ, ವೆಟ್ಟೋರಿ, ಆಸ್ಟ್ರೇಲಿಯಾದ ವಾರ್ನ್, ಇಂಗ್ಲೆಂಡ್ ನ ಬ್ರಾಡ್, ದಕ್ಷಿಣ ಆಫ್ರಿಕಾದ ಶಾನ್ ಪೊಲಾಕ್, ಪಾಕಿಸ್ತಾನದ ಇಮ್ರಾನ್ ಖಾನ್, ಶ್ರೀಲಂಕಾದ ಚಾಮಿಂಡಾ ವಾಸ್ ಈ ಸಾಧನೆ ಮಾಡಿದ್ದಾರೆ.

300ಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತೀಯರ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ(619), ಆರ್. ಅಶ್ವಿನ್(524) ಕಪಿಲ್ ದೇವ್(434), ಹರ್ಭಜನ್ ಸಿಂಗ್(417), ಇಶಾಂತ್ ಶರ್ಮಾ(311), ಜಹೀರ್ ಖಾನ್(311), ರವೀಂದ್ರ ಜಡೇಜಾ 300 ವಿಕೆಟ್ ಪಡೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read