ಯಾವಾಗಲೂ ನಿಂತೇ ಇರುವುದು ಅಸಾಧ್ಯ. ಆಗಾಗ ಕುಳಿತು ವಿಶ್ರಾಂತಿ ಪಡೆಯುವುದು ಸಹಜ. ಆದರೆ ಸಾಮಾನ್ಯವಾಗಿ ನಾವೆಲ್ಲ ಸೋಫಾ ಅಥವಾ ಕುರ್ಚಿ ಮೇಲೆ ಆರಾಮಾಗಿ ವಿರಮಿಸುತ್ತೇವೆ. ಬಹಳ ಸಮಯ ಕುಳಿತೇ ಇರುವುದು ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು.
ಆದರೆ ಪ್ರತಿದಿನ 15 ರಿಂದ 30 ನಿಮಿಷಗಳ ಕಾಲ ನೆಲದ ಮೇಲೆ ಕುಳಿತುಕೊಳ್ಳುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದರಿಂದ ದೀರ್ಘಾಯುಷಿಗಳಾಗಬಹುದು.
ಹತ್ತು ಆರೋಗ್ಯಕರ ಅಭ್ಯಾಸಗಳಲ್ಲಿ ಒಂದು ನಿಮ್ಮ ಕಾಲುಗಳನ್ನು ಅಡ್ಡಲಾಗಿ ನೆಲದ ಮೇಲೆ ಕುಳಿತುಕೊಳ್ಳುವುದು. ಅಂತಹ ಚಟುವಟಿಕೆಗಳು ನಿಮ್ಮ ದೇಹದ ಎಲ್ಲಾ ಅಂಗಗಳನ್ನು ಮುಕ್ತವಾಗಿ ಮತ್ತು ಸಲೀಸಾಗಿ ಚಲಿಸಲು ಅನುವು ಮಾಡಿಕೊಡುತ್ತದೆ. ಪ್ರತಿದಿನ 15-30 ನಿಮಿಷಗಳ ಕಾಲ ನೆಲದ ಮೇಲೆ ಕುಳಿತುಕೊಳ್ಳುವ ಅಭ್ಯಾಸವು ನಿಮ್ಮ ಆರೋಗ್ಯದ ಮೇಲೆ ಏನೆಲ್ಲಾ ಬದಲಾವಣೆಗಳನ್ನು ತರುತ್ತದೆ ಎಂಬುದನ್ನು ನೋಡೋಣ.
ನೆಲದ ಮೇಲೆ ಕುಳಿತು ತಿನ್ನುವುದರಿಂದ ದೇಹಕ್ಕೆ ಹೋಗುವ ಪದಾರ್ಥಗಳ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ದೇಹಕ್ಕೆ ಹೆಚ್ಚಿನ ಪೋಷಣೆಯನ್ನು ನೀಡುತ್ತದೆ. ನೆಲದ ಮೇಲೆ ಕುಳಿತುಕೊಳ್ಳುವುದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ದೇಹದ ನೋವು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದರಿಂದ ದೇಹದ ಫಿಟ್ನೆಸ್ ಹೆಚ್ಚುತ್ತದೆ ಮತ್ತು ನಿಮ್ಮನ್ನು ಚಟುವಟಿಕೆಯಿಂದ ಇಡುತ್ತದೆ. ಸಯಾಟಿಕಾ ಸಮಸ್ಯೆ ಇರುವವರು ನೆಲದ ಮೇಲೆ ಕುಳಿತುಕೊಳ್ಳಬೇಕು. ಇದರಿಂದ ನೋವಿಗೆ ಪರಿಹಾರ ಸಿಗುತ್ತದೆ. ದೇಹದ ನರಗಳಲ್ಲಿನ ನೋವನ್ನು ಇದು ಕಡಿಮೆ ಮಾಡುತ್ತದೆ. ನೆಲದ ಮೇಲೆ ಕುಳಿತಾಗ ದೇಹದ ಸಂಪರ್ಕಕ್ಕೆ ಬರುವ ನೆಲದಿಂದ ನೀವು ಹೆಚ್ಚಿನ ಶಕ್ತಿಯನ್ನು ಪಡೆಯುತ್ತೀರಿ.
ಇದು ದೇಹದ ಕಾರ್ಯಗಳನ್ನು ವೇಗಗೊಳಿಸುತ್ತದೆ ಮತ್ತು ಹೆಚ್ಚು ಚೈತನ್ಯವನ್ನು ಅನುಭವಿಸುವಂತೆ ಮಾಡುತ್ತದೆ. ನೆಲದ ಮೇಲೆ ಕುಳಿತುಕೊಳ್ಳುವುದು ಬೆನ್ನುಮೂಳೆಯ ಸ್ಥಿರತೆಯನ್ನು ಹೆಚ್ಚಿಸುತ್ತದೆ ಮತ್ತು ಬೆನ್ನುನೋವಿನಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.