ಜಾಗತಿಕ ಭಾಷೆ ಇಂಗ್ಲೀಷ್ ಆಗಿರುವ ಕಾರಣ ಈಗ ಪ್ರತಿಯೊಂದು ಕ್ಷೇತ್ರದಲ್ಲೂ ಇಂಗ್ಲೀಷ್ ಬೇಕೇಬೇಕು. ಈಗ ಇಂಗ್ಲೀಷ್ ಮಾತನಾಡುವುದು ಬಹಳ ಮುಖ್ಯ. ಖಾಸಗಿ ಶಾಲೆಗಳಲ್ಲಿ ಕೂಡ ಇಂಗ್ಲೀಷ್ ಮಾತನಾಡುವುದನ್ನು ಕಡ್ಡಾಯ ಮಾಡ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನರಿಗೆ ಇಂಗ್ಲೀಷ್ ಬಗ್ಗೆ ಉತ್ತಮ ಜ್ಞಾನವಿರುತ್ತದೆ. ಆದ್ರೆ ಮಾತನಾಡಲು ಹಿಂಜರಿಯುತ್ತಾರೆ. ಇದು ಅವ್ರ ವೃತ್ತಿ ಮೇಲೆ ಪರಿಣಾಮ ಬೀರುತ್ತದೆ.
ಇಂಗ್ಲೀಷ್ ಕಲಿಸಲು ಅನೇಕ ಕೋಚಿಂಗ್ ಸೆಂಟರ್ ಗಳಿವೆ. ಅದಕ್ಕೆ ಹೋಗುವ ಮೊದಲು ಮನೆಯಲ್ಲಿಯೇ ಇಂಗ್ಲೀಷನ್ನು ಸುಲಭವಾಗಿ ಕಲಿಯಬಹುದು.
ಮನೆಗೆ ಕನ್ನಡ ನ್ಯೂಸ್ ಪೇಪರ್ ಗಳು ಬರ್ತಿದ್ದರೆ ಅದ್ರ ಜೊತೆ ಇಂಗ್ಲೀಷ್ ನ್ಯೂಸ್ ಪೇಪರ್ ಗಳನ್ನೂ ಮನೆಗೆ ತನ್ನಿ. ಮನೆಯಲ್ಲಿ ಇಂಗ್ಲೀಷ್ ಪತ್ರಿಕೆಯನ್ನು ದೊಡ್ಡದಾಗಿ ಓದಿ. ಇದ್ರಿಂದ ಇಂಗ್ಲೀಷ್ ನ ಹೊಸ ಹೊಸ ಶಬ್ಧಗಳ ಪರಿಚಯ ನಿಮಗಾಗುತ್ತದೆ.
ತಪ್ಪಾದ್ರೂ ಸರಿ ಇಂಗ್ಲೀಷ್ ಮಾತನಾಡುವುದನ್ನು ಶುರು ಮಾಡಿ. ಬೇರೆಯವರ ಮುಂದೆ ಇಂಗ್ಲೀಷ್ ತಪ್ಪಾಗಿ ಮಾತನಾಡಿ ಮುಜುಗರಕ್ಕೊಳಗಾಗ್ತೀರಿ ಎಂಬ ಭಯವಿದ್ದರೆ ಕನ್ನಡಿ ಮುಂದೆ ಇಂಗ್ಲೀಷ್ ಮಾತನಾಡಿ. ನಿಧಾನವಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ಇಂಟರ್ನೆಟ್ ನಲ್ಲಿಯೂ ನೀವು ಇಂಗ್ಲೀಷ್ ಕಲಿಯಬಹುದು. ಅನೇಕ ವೆಬ್ ಸೈಟ್ ಗಳು ಉಚಿತವಾಗಿ ನಿಮಗೆ ಇಂಗ್ಲೀಷ್ ಹೇಳಿ ಕೊಡುತ್ತವೆ. ಅದ್ರ ಸಹಾಯದಿಂದ ನೀವು ಇಂಗ್ಲೀಷ್ ಕಲಿಯಬಹುದಾಗಿದೆ. ಮೊಬೈಲ್ ಆ್ಯಪ್ ಮೂಲಕ ಕೂಡ ನೀವು ಇಂಗ್ಲೀಷನ್ನು ಮನೆಯಲ್ಲಿಯೇ ಕುಳಿತು ಕಲಿಯಬಹುದು.
ನಿಮ್ಮ ಆಲೋಚನೆ ಇಂಗ್ಲೀಷ್ ನಲ್ಲಿರಲಿ. ಕನ್ನಡವನ್ನು ಇಂಗ್ಲೀಷ್ ಗೆ ಅನುವಾದ ಮಾಡುವ ಬದಲು ಇಂಗ್ಲೀಷ್ ನಲ್ಲಿಯೇ ಯೋಚನೆ ಮಾಡಿ ಉತ್ತರ ನೀಡಿ. ಇದು ನೀವು ಶೀಘ್ರವೇ ಇಂಗ್ಲೀಷ್ ಕಲಿಯಲು ನೆರವಾಗುತ್ತದೆ.
ಕನ್ನಡ, ಹಿಂದಿ ಚಾನೆಲ್ ಗಳ ಜೊತೆ ಇಂಗ್ಲೀಷ್ ಚಾನೆಲ್ ವೀಕ್ಷಣೆ ಜಾಸ್ತಿ ಮಾಡಿ. ಇಂಗ್ಲೀಷ್ ನ್ಯೂಸ್ ಗಳನ್ನು ಹೆಚ್ಚಾಗಿ ನೋಡಿ. ಇದು ನಿಮ್ಮ ಇಂಗ್ಲೀಷ್ ಜ್ಞಾನವನ್ನು ಹೆಚ್ಚಿಸುತ್ತದೆ.