ಟಾಟಾ ಮೋಟಾರ್ಸ್ ನಿಂದ ʼಕರ್ವ್ʼ ಇವಿ ಬಿಡುಗಡೆ; ಇಲ್ಲಿದೆ ಬೆಲೆ ಸೇರಿದಂತೆ ಅದರ ʼವಿಶೇಷತೆʼ

ಎಸ್‌ಯುವಿ ವಿಭಾಗದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿರುವ ಭಾರತದ ಪ್ರಮುಖ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಬುಧವಾರ ಅಧಿಕೃತವಾಗಿ ಕರ್ವ್ ಇವಿ ಅನ್ನು ಬಿಡುಗಡೆ ಮಾಡಿದೆ ಮತ್ತು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳನ್ನೂ ಹೊಂದಿರುವ ಟಾಟಾ ಕರ್ವ್ ಅನ್ನು ಅನಾವರಣ ಮಾಡಿದೆ.

‘ಅಚ್ಚರಿಗೊಳಿಸಲು ರೂಪಿಸಲಾಗಿದೆ’, ‘ಅದ್ದೂರಿತನಕ್ಕಾಗಿ ರೂಪಿಸಲಾಗಿದೆ’, ‘ಕಾರ್ಯಕ್ಷಮತೆಗಾಗಿ ರೂಪಿಸಲಾಗಿದೆ’, ‘ಅತ್ಯಾಧುನಕ ತಂತ್ರಜ್ಞಾನಕ್ಕಾಗಿ ರೂಪಿಸಲಾಗಿದೆ’ ಮತ್ತು ‘ಅತ್ಯುತ್ತಮ ಸುರಕ್ಷತೆಗಾಗಿ ರೂಪಿಸಲಾಗಿದೆ’ ಎಂಬ 5 ಪ್ರಮುಖ ಉದ್ದೇಶಗಳ ಆಧಾರದ ಮೇಲೆ ನಿರ್ಮಿಸಲಾಗಿರುವ ಕರ್ವ್ ಅನ್ನು ಪರಿಚಯಿಸುವ ಮೂಲಕ ಕಂಪನಿಯು ಅತ್ಯಂತ ಸ್ಪರ್ಧಾತ್ಮಕ ವಿಭಾಗವಾದ ಮಿಡ್ ಎಸ್‌ಯುವಿ ವಿಭಾಗಕ್ಕೆ ಪ್ರವೇಶ ಮಾಡಿದೆ.

ಎಸ್‌ಯುವಿಯ ದೃಢತೆ ಮತ್ತು ಕೂಪ್ ನ ಸೊಬಗಿನ ಮಿಶ್ರಣವಾಗಿರುವ ಈ ಹೊಸ ವಾಹನವು ಟಾಟಾ ಮೋಟಾರ್ಸ್‌ನ ಎಸ್‌ಯುವಿ ಶ್ರೇಣಿಗೆ ಹೊಸ ಸೇರ್ಪಡೆಯಾಗಿದೆ. ಚೌಕಟ್ಟಿನ ಎಸ್‌ಯುವಿ ಬಾಡಿ ಸ್ಟೈಲ್‌ಗಳು ಪ್ರಾಬಲ್ಯ ಸಾಧಿಸಿರುವ ಈ ಸಂದರ್ಭದಲ್ಲಿ ಅ ಸಂಪ್ರದಾಯವನ್ನು ಮುರಿದು ವಿಶಿಷ್ಟ ದೇಹ ಶೈಲಿಯ ಭಾರತದ ಮೊದಲ ಎಸ್‌ಯುವಿ ಕೂಪ್ ಅನ್ನು ದೇಶಕ್ಕೆ ಪರಿಚಯಿಸಿದ ಮೊದಲ ಓಇಎಂ ಎಂಬ ಹೆಗ್ಗಳಿಕೆಯನ್ನು ಟಾಟಾ ಮೋಟಾರ್ಸ್ ಕಂಪನಿ ತನ್ನ ಮುಡಿಗೇರಿಸಿಕೊಂಡಿದೆ.

2022ರಲ್ಲಿಯೇ ಭರವಸೆ ನೀಡಿದ ಪ್ರಕಾರ ಕಂಪನಿಯು ಬುಧವಾರ ಮೊದಲು ಕರ್ವ್ ಇವಿ ಅನ್ನು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಶೀಘ್ರವಾಗಿ ಐಸಿಇ ಆವೃತ್ತಿಗಳು ಬಿಡುಗಡೆ ಆಗಲಿವೆ. ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿಯ (ಟಿಪಿಇಎಂ) ಅತ್ಯಾಧುನಿಕ ಶುದ್ಧ ಇವಿ ಆರ್ಕಿಟೆಕ್ಚರ್ ಆದ ಆಕ್ಟಿ.ಇವಿಯಲ್ಲಿ ಸಿದ್ಧಗೊಂಡಿರುವ ಎರಡನೇ ಉತ್ಪನ್ನವಾಗಿರುವ ಕರ್ವ್.ಇವಿ ಭಾರತದ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ.

ಕ್ರಿಯೇಟಿವ್, ಅಕಂಪ್ಲಿಶ್ಡ್ ಮತ್ತು ಎಂಪವರ್ಡ್+ ಎಂಬ ಮೂರು ವಿಭಿನ್ನ ರೂಪಗಳಲ್ಲಿ ಲಭ್ಯವಿರುವ ಕರ್ವ್.ಇವಿ ಆರಾಮದಾಯಕತೆ, ವಿಶಾಲವಾದ ಸ್ಥಳಾವಕಾಶ, ವಿಶೇಷ ಫೀಚರ್ ಗಳು, ಅತ್ಯುತ್ತಮ ಸುರಕ್ಷತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಪರಿಪೂರ್ಣ ಸಮ್ಮಿಶ್ರಣವಾಗಿದೆ. ವಿಶೇಷವೆಂದರೆ ಈ ಇವಿಗಳು ಸುದೀರ್ಘವಾದ ರೇಂಜ್, ವೇಗದ ಚಾರ್ಜಿಂಗ್ ಸಾಮರ್ಥ್ಯ ಹೊಂದಿದ್ದು, ಕರ್ವ್ ನ ಐಸಿಇ ವೇರಿಯಂಟ್ ಗಳಿಗೆ ಸಮಾನ ಬೆಲೆಯನ್ನು ಹೊಂದಿರುವುದು ಅಚ್ಚರಿಯ ವಿಚಾರ. 55kWh ಬ್ಯಾಟರಿ ಪ್ಯಾಕ್‌ ನ ಇವಿಯನ್ನು ಒಂದು ಸಲ ಪೂರ್ತಿ ಚಾರ್ಜ್‌ ಮಾಡಿದರೆ ಸುದೀರ್ಘ 585 ಕಿಮೀ ಮತ್ತು 45kWh (ಎ ಆರ್ ಎ ಐ ಪ್ರಮಾಣೀಕೃತ, ಎಂಐಡಿಸಿ ಭಾಗ 1) ಬ್ಯಾಟರಿ ಆಯ್ಕೆಯಲ್ಲಿ 502 ಕಿಮೀ ನಷ್ಟು ದೀರ್ಘ ಡ್ರೈವಿಂಗ್ ರೇಂಜ್‌ ಒದಗಿಸುತ್ತದೆ. ಟಾಟಾ ಕರ್ವ್.ಇವಿ45ನ ಆರಂಭಿಕ ಬೆಲೆ ₹ 17.49 ಲಕ್ಷ. ಟಾಟಾ ಕರ್ವ್.ಇವಿ55 ಆರಂಭಿಕ ಬೆಲೆ ₹ 19.25 ರೂಪಾಯಿ.

ವಿಶೇಷ ಎಂದರೆ ಈ ಪ್ರೀಮಿಯಂ ಎಸ್‌ಯುವಿ ಯ ಬಿಡುಗಡೆಯ ಜೊತೆಗೆ ಕಂಪನಿಯು ವೈಯಕ್ತೀಕರಿಸಿದ ಕಸ್ಟಮೈಸೇಷನ್ ಸೇರಿದಂತೆ ಇವಿ ಪರಿಕರಗಳನ್ನು ಒದಗಿಸುವ ಹೊಸ ವಿಭಾಗವಾದ ಟಾಟಾ.ಇವಿ ಒರಿಜಿನ್ಸ್ ಅನ್ನು ಆರಂಭಿಸಿದೆ. ಜೊತೆಗೆ ಟಿಪಿಐಎಂ ಕಂಪನಿಯು ಗ್ರಾಹಕರಿಗೆ ಟಾಟಾ.ಇವಿ ಚಾರ್ಜ್ ಪಾಯಿಂಟ್ ಅಗ್ರಿಗೇಟರ್ ಆಗಿರುವ ಕನೆಕ್ಟೆಡ್ ಕಾರ್ ಆಪ್ iRA.ev ಅನ್ನು ಪರಿಚಯಿಸುತ್ತಿದೆ. ಈ ಸಂಸ್ಥೆಯ ಭಾರತದಾದ್ಯಂತ 9000+ ಚಾರ್ಜಿಂಗ್ ಪಾಯಿಂಟ್‌ಗಳ ಅತಿ ದೊಡ್ಡ ನೆಟ್ ವರ್ಕ್ ಅನ್ನು ಹೊಂದಿದ್ದು, ಲೈವ್ ಸ್ಟೇಟಸ್ ಕೂಡ ತೋರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read