ಪ್ರಮೋದ್ ಶೆಟ್ಟಿ ಅಭಿನಯದ ಎಂ ಭರತ್ ರಾಜ್ ನಿರ್ದೇಶನದ ‘ಲಾಫಿಂಗ್ ಬುದ್ಧ’ ಚಿತ್ರ ತನ್ನ ಟ್ರೈಲರ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದ್ದು, ತೆರೆ ಮೇಲೆ ಬರಲು ಸಜ್ಜಾಗಿದೆ. ಇದೇ ಆಗಸ್ಟ್ 30ರಂದು ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ಪೊಲೀಸ್ ಅಧಿಕಾರಿಗಳ ಕುರಿತ ಈ ಚಿತ್ರವನ್ನು ನಟ ರಿಷಬ್ ಶೆಟ್ಟಿ ತಮ್ಮ ರಿಷಬ್ ಶೆಟ್ಟಿ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಪ್ರಮೋದ್ ಶೆಟ್ಟಿ, ತೇಜು ಬೆಳವಾಡಿ, ಸುಂದರ್ ರಾಜ್, ಸ್ನೇಹಶ್ರೀ ಹಾಗೂ ದಿಗಂತ್ ಪ್ರಮುಖ ಪಾತ್ರದಲ್ಲಿದ್ದಾರೆ. ವಿಷ್ಣು ವಿಜಯ್ ಸಂಗೀತ ಸಂಯೋಜನೆ ನೀಡಿದ್ದು, ಕೆ ಎಂ ಪ್ರಕಾಶ್ ಸಂಕಲನ, ಅನಿರುದ್ಧ ಮಹೇಶ್, ಎಂ ಭರತ್ ರಾಜ್, ಹಾಗೂ ರಘು ನೀಡುವಳ್ಳಿ ಅವರ ಸಂಭಾಷಣೆ, ಚಂದ್ರಶೇಖರನ್ ಛಾಯಾಗ್ರಹಣವಿದೆ,