ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಈ ಸ್ಥಳದಲ್ಲಿಡಿ ‘ಲಾಫಿಂಗ್ ಬುದ್ಧ’

ಸಂಪತ್ತು, ಸುಖ, ಸಕಾರಾತ್ಮಕ ಶಕ್ತಿ ವೃದ್ಧಿಗೆ ಲಾಫಿಂಗ್ ಬುದ್ಧನನ್ನು ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಇಡುತ್ತಾರೆ. ಲಾಫಿಂಗ್ ಬುದ್ಧನನ್ನು ಮನೆಯಲ್ಲಿಟ್ಟರೆ ಶಾಂತಿ, ನೆಮ್ಮದಿ ಮನೆಯಲ್ಲಿರುತ್ತದೆ ಎಂದು ಹೇಳಲಾಗುತ್ತದೆ.

ಮನೆ ಹಾಗೂ ಕಚೇರಿಗಳಲ್ಲಿ ಲಾಫಿಂಗ್ ಬುದ್ಧನನ್ನು ಇಡಬೇಕು. ಶಾಸ್ತ್ರಗಳ ಪ್ರಕಾರ ಲಾಫಿಂಗ್ ಬುದ್ಧನನ್ನು ಇಡಲು ಕೆಲ ನಿಯಮಗಳಿವೆ. ಅದನ್ನು ಪಾಲಿಸಬೇಕಾಗುತ್ತದೆ. ಇಲ್ಲವಾದ್ರೆ ಸುಖ, ಶಾಂತಿ, ಆರ್ಥಿಕ ವೃದ್ಧಿ ಬದಲು ನಷ್ಟ, ಅಶಾಂತಿ, ನಕಾರಾತ್ಮಕ ಶಕ್ತಿಯ ಪ್ರಭಾವಕ್ಕೊಳಗಾಗಬೇಕಾಗುತ್ತದೆ.

ಲಾಫಿಂಗ್ ಬುದ್ಧನನ್ನು ಮನೆಯ ಮುಖ್ಯದ್ವಾರದ ಬಳಿ ಇಡಬೇಕು. ಮನೆಗೆ ಬರುವ ಪ್ರತಿಯೊಂದು ಸುಖವನ್ನು ಲಾಫಿಂಗ್ ಬುದ್ಧ ನೋಡಬೇಕು. ಹಾಗೆ ಲಾಫಿಂಗ್ ಬುದ್ಧನನ್ನು ನೆಲದಿಂದ ಮೂರು ಅಡಿ ಎತ್ತರದಲ್ಲಿ ಇಡಬೇಕು.

ಲಾಫಿಂಗ್ ಬುದ್ಧನನ್ನು ಶೌಚಾಲಯ, ಸ್ನಾನಗೃಹ, ಮಲಗುವ ಕೋಣೆ, ಊಟದ ಟೇಬಲ್ ಬಳಿ ಇಡಬಾರದು. ಈ ಸ್ಥಳಗಳಲ್ಲಿ ಲಾಫಿಂಗ್ ಬುದ್ಧನನ್ನಿಟ್ಟರೆ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ ಲಾಫಿಂಗ್ ಬುದ್ಧನನ್ನು ಎಂದೂ ನೆಲದ ಮೇಲೆ ಇಡಬಾರದು.

ಲಾಫಿಂಗ್ ಬುದ್ಧನನ್ನು ಎಂದೂ ಪೂಜಿಸುವ ಜಾಗದಲ್ಲಿ, ಪವಿತ್ರ ಸ್ಥಳದಲ್ಲಿ ಇಡಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read