ನಿರ್ಮಾಣ ಹಂತದಲ್ಲಿರುವ ಅಯೋಧ್ಯೆಯ ರಾಮ ಮಂದಿರದ ಇತ್ತೀಚಿನ ಚಿತ್ರಗಳು ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿವೆ.
ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಹಾ ಕಾರ್ಯದರ್ಶಿ ಈ ಚಿತ್ರಗಳನ್ನು ಶೇರ್ ಮಾಡಿದ್ದಾರೆ. 2024ರ ವೇಳೆಗೆ ದೇಗುಲದ ನಿರ್ಮಾಣ ಪೂರ್ಣ ಪ್ರಮಾಣದಲ್ಲಿ ಮುಕ್ತಾಯವಾಗುವ ಅಂದಾಜಿದೆ. ದೇಗುಲದ ಚಿತ್ರಗಳು ನಿರ್ಮಾಣ ಹಂತದಲ್ಲೂ ಕೂಡಾ ಭವ್ಯವಾಗಿಯೇ ಕಾಣುತ್ತಿವೆ.
ಪೂರ್ಣವಾಗಿ ನಿರ್ಮಾಣಗೊಂಡ ಬಳಿಕ ದೇಗುಲವು 160 ಅಡಿ ಉದ್ದವಿರಲಿದ್ದು, 27 ಎಕರೆಯಷ್ಟು ವಿಸ್ತಾರವಾಗಿ ಹಬ್ಬಲಿದೆ. ಮೂರು ಮಹಡಿಗಳಲ್ಲಿ ಹಬ್ಬಲಿರುವ ಈ ದೇಗುಲವು ಮೂರನೇ ಅತಿ ದೊಡ್ಡ ಹಿಂದೂ ದೇವಾಲಯವಾಗಲಿದೆ. ದೇಗುಲದ ಸಮುಚ್ಛಯದಲ್ಲಿ ಇನ್ನಷ್ಟು ಹಿಂದೂ ದೇವರುಗಳ ಗುಡಿಗಳೂ ಸಹ ಇರಲಿದ್ದು, ಭಕ್ತರಿಗೆ ದೇವಲೋಕದ ಅನುಭೂತಿ ನೀಡಲಿದೆ.