alex Certify ಭೂ ಕುಸಿತ: ರೈಲ್ವೆ ಹಳಿಗಳ ಮೇಲೆ ಬಿದ್ದ ಮಣ್ಣು: ಕಾರವಾರ-ಬೆಂಗಳೂರು ರೈಲು ಸಂಚಾರ ಸ್ಥಗಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೂ ಕುಸಿತ: ರೈಲ್ವೆ ಹಳಿಗಳ ಮೇಲೆ ಬಿದ್ದ ಮಣ್ಣು: ಕಾರವಾರ-ಬೆಂಗಳೂರು ರೈಲು ಸಂಚಾರ ಸ್ಥಗಿತ

ಕಾರವಾರ: ಪಶ್ಚಿಮ ಘಟ್ಟ, ಕರಾವಳಿ ಭಾಗದಲ್ಲಿ ಭಾರಿ ಮಳೆಯಿಂದಾಗಿ ಭೂ ಕುಸಿತ, ಗುಡ್ಡ ಕುಸಿತ ಅವಘಡಗಳು ಸಂಭವಿಸುತ್ತಿವೆ. ಹಲವೆಡೆ ರೈಲ್ವೆ ಹಳಿಗಳ ಮೇಲೆ ಗುಡ್ಡ ಕುಸಿತ ಸಂಭವಿಸಿದ್ದು, ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

ಪಶ್ಚಿಮ ಘಟ್ಟ ಭಾಗದ ಎಡಕುಮೇರಿ-ಕಡಗರಹಳ್ಳಿ ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ್ದು, ರೈಲ್ವೆ ಹಳಿಗಳ ಮೇಲೆ ಮಣ್ಣು ಬಿದ್ದಿರುವ ಪರಿಣಾಮ ರೈಲು ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಮಣ್ಣು ತೆರವು ಕಾರ್ಯಾಚರಣೆ, ದುರಸ್ತಿ ಕಾರ್ಯಗಳು ನಡೆಯುತ್ತಿದ್ದು, ಕೊಂಕಣ ರೈಲು ಮಾರ್ಗದಲ್ಲಿ ಕಾರವಾರ-ಬೆಂಗಳೂರು ಸಂಚರಿಸುವ ರೈಲುಗಳು ತಾತ್ಕಾಲಿಕವಾಗಿ ರದ್ದುಗೊಂಡಿವೆ.

ಕಾರವಾರ-ಬೆಂಗಳೂರು ನಡುವಿನ ಎಲ್ಲಾ ರೈಲುಗಳನ್ನು ಆಗಸ್ಟ್ 8ರವರೆಗೆ ರದ್ದುಪಡಿಸಲಾಗಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ.

ರದ್ದಾಗಿರುವ ರೈಲುಗಳು:

ರೈಲು ನಂ.16595 – ಕೆಎಸ್ ಆರ್ ಬೆಂಗಳೂರು – ಕಾರವಾರ ಎಕ್ಸ್‌ಪ್ರೆಸ್‌ ಆಗಸ್ಟ್ 7ರವರೆಗೆ ರದ್ದು
ರೈಲು ನಂ.16596 ಕಾರವಾರ – ಕೆಎಸ್ ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ ಸಂಚಾರ ಆ.8ರವರೆಗೆ ರದ್ದು
ರೈಲು ನಂ.01595 ಕಾರವಾರ- ಮಡಗಾಂವ್, ರೈಲು ನಂ. 01596 ಮಡಗಾಂವ್-ಕಾರವಾರ ವಿಶೇಷ ರೈಲಿನ ಸಂಚಾರ ಆ.8ರವರೆಗೆ ರದ್ದು
ರೈಲು ನಂ.16585 ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು- ಮುರ್ಡೇಶ್ವರ ಎಕ್ಸ್‌ಪ್ರೆಸ್‌ ರೈಲು ಸಂಚಾರ ಆ.7ರವರೆಗೆ ರದ್ದು
ರೈಲು ನಂ.16586 ಮುರ್ಡೇಶ್ವರ- ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಸಂಚಾರ ಆ.8ರವರೆಗೆ ರದ್ದು
ರೈಲು ನಂ.16515 ಕೆಎಸ್ಆರ್ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ ರೈಲು ಆ.7ರವರೆಗೆ ರದ್ದು.
ರೈಲು ನಂ.16516 ಕಾರವಾರ- ಕೆಎಸ್ಆರ್ ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಸಂಚಾರ ಆ.8ರವರೆಗೆ ರದ್ದು

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...