
ಚಾಮರಾಜನಗರ: ಚಲಿಸುತ್ತಿದ್ದ ಬಸ್ ಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಎದುರು ನಡೆದಿದೆ.
ಚಾಮರಾಜನಗರ ತಾಲೂಕಿನ ಯಾಲಕ್ಕೂರು ಗ್ರಾಮದ ರಂಗಸ್ವಾಮಿ(34) ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಬಸ್ ನಿಲ್ದಾಣದಿಂದ ಮೈಸೂರಿನ ಕಡೆಗೆ ಬಸ್ ತೆರಳುವಾಗ ರಸ್ತೆ ಬದಿ ನಿಂತಿದ್ದ ರಂಗಸ್ವಾಮಿ ಚಲಿಸುತ್ತಿದ್ದ ಬಸ್ ನ ಹಿಂಬದಿ ಚಕ್ರಕ್ಕೆ ಹಾರಿದ್ದಾನೆ. ಇದನ್ನು ಗಮನಿಸಿದ ಚಾಲಕ ಬ್ರೇಕ್ ಹಾಕಿದ್ದು, ಈ ವೇಳೆಗಾಗಲೇ ಚಕ್ರ ಆತನ ಮೇಲೆ ಉರುಳಿದ್ದರಿಂದ ಸ್ಥಳದಲ್ಲೇ ರಂಗಸ್ವಾಮಿ ಮೃತಪಟ್ಟಿದ್ದಾನೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಅಂಗಡಿಯೊಂದರ ಮುಂಭಾಗ ಅಳವಡಿಸಿರುವ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.