ಮಂಡ್ಯ: ಲ್ಕೆ.ಎಸ್.ಆರ್.ಟಿ.ಸಿ ಬಸ್ ಚಲಾಯಿಸುತ್ತಿದ್ದ ವೇಳೆ ಚಾಲಕ ಏಕಾಏಕಿ ಮೂರ್ಛೆ ಹೋಗಿದ್ದು, ಬಸ್ ಸರಣಿ ಅಪಘಾತಕ್ಕೀಡಾದ ಘಟನೆ ಮಂಡ್ಯ ಜಿಲ್ಲೆಯ ಮಡಕಶಿರದ ಮಾರುತಿ ನಗರದಲ್ಲಿ ನಡೆದಿದೆ.
ಬಸ್ ಪಾವಗಡದಿಂದ ಬೆಂಗಳೂರಿಗೆ ತೆರಳುತ್ತಿತ್ತು. ಈ ವೇಳೆ ಬಸ್ ಚಾಲಕ ಇದ್ದಕ್ಕಿದ್ದಂತೆ ಮೂರ್ಛೆ ಹೋಗಿದ್ದು, ನಿಯಂತ್ರನ ತಪ್ಪಿದ ಬಸ್, ಗೂಡ್ಸ್ ಹಾಗೂ ಆಟೋಗೆ ಡಿಕ್ಕಿ ಹೊದೆದಿದೆ. ಬಳಿಕ ರಸ್ತೆ ಬದಿ ಹೋಗುತ್ತಿದ್ದ ರೈತರೊಬ್ಬರಿಗೆ ಗುದ್ದಿದೆ. ಕೂದಲೆಅಂತರದಲ್ಲಿ ಬಸ್ ನಲ್ಲಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಪಾರಾಗಿದ್ದಾರೆ.
ರೈತ ನಾರಾಯಣ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.