ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಎಂದಿದ್ರು ಕೊಟ್ರಾ? : ಕೆ.ಎಂ ಶಿವಲಿಂಗೇಗೌಡ ವಾಗ್ದಾಳಿ

ಬೆಂಗಳೂರು : ಪ್ರಧಾನಿ ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಎಂದಿದ್ದರು ಕೊಟ್ರಾ? , ನೀವು ಅಕ್ಕಿ ಕೊಡುವುದರಲ್ಲೂ ರಾಜಕಾರಣ ಮಾಡುತ್ತೀರಲ್ಲಾ ಎಂದು ಬಿಜೆಪಿ ವಿರುದ್ಧ ಕೆಎಂ ಶಿವಲಿಂಗೇಗೌಡ ವಾಗ್ದಾಳಿ ನಡೆಸಿದ್ದಾರೆ.

ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಎಂದಿದ್ದರು ಕೊಟ್ರಾ? ರಾಜ್ಯ ಸಂಕಷ್ಟಕ್ಕೆ ಸಿಲುಕಿದಾಗ ಕೇಂದ್ರ ಸರ್ಕಾರ ನೆರವಿಗೆ ಬರಬೇಕು. ನೀವು ಬರೀ ಅಕ್ಕಿ ಕೊಡುವ ವಿಚಾರಕ್ಕೆ ರಾಜಕಾರಣ ಮಾಡಿದ್ದೀರಲ್ಲಾ ಎಂದು ಕೆಎಂ ಶಿವಲಿಂಗೇಗೌಡ ವಾಗ್ದಾಳಿ ನಡೆಸಿದ್ದಾರೆ. ಈ ವಿಚಾರಕ್ಕೆ ಸದನದಲ್ಲಿ ಗದ್ದಲ ಶುರುವಾಯಿತು.

ಗ್ಯಾರಂಟಿ ಬದಲಿಗೆ ದೋಖಾ ನಡೆದಿದೆ : ಮಾಜಿ ಸಿಎಂ ಬೊಮ್ಮಾಯಿ

ಗ್ಯಾರಂಟಿ ಬದಲಿಗೆ ದೋಖಾ ನಡೆದಿದೆ ಎಂದು ಮಾಜಿ ಸಿಎಂ ಬೊಮ್ಮಾಯಿ ವಾಗ್ಧಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ . ಕೇಂದ್ರದ ಅಕ್ಕಿ ಹೊರತುಪಡಿಸಿ 10 ಕೆಜಿ ಅಕ್ಕಿ ಕೊಡ್ತೀವಿ ಎಂದ ಕಾಂಗ್ರೆಸ್ ಜನರಿಗೆ ಮೋಸ ಮಾಡಿದೆ. ಗ್ಯಾರಂಟಿ ಬದಲಿಗೆ ದೋಖಾ ನಡೆದಿದೆ ಎಂದು ಮಾಜಿ ಸಿಎಂ ಬೊಮ್ಮಾಯಿ ವಾಗ್ಧಾಳಿ ನಡೆಸಿದ್ದಾರೆ.

3 ಕೆಜಿ ಅಕ್ಕಿ, 2 ಕೆಜಿ ಜೋಳ ಅಥವಾ ರಾಗಿ ಕೊಡ್ತೀವಿ ಅಂತಿದ್ದಾರೆ. ಇದು ಅನ್ನಭಾಗ್ಯ ಅಲ್ಲ ಕನ್ನಭಾಗ್ಯ ಯೋಜನೆ. ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟೀಕರಣ ಕೊಡಬೇಕಿದೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಗ್ಯಾರಂಟಿ ವಿಚಾರ ಮುಂದಿಟ್ಟುಕೊಂಡು BJP ಸದಸ್ಯರು ಸದನದಲ್ಲಿ ಗದ್ದಲ ನಡೆಸಿದರು.ಮೋದಿಪ್ರತಿಯೊಬ್ಬರಿಗೂ 15 ಲಕ್ಷ ಹಾಕ್ತೀನಿ ಅಂತಾ ಹೇಳಿದ್ದರು. ಬ್ಯಾಂಕ್ ಖಾತೆ ಮಾಡಿಸಿದರು, ಎಲ್ಲಿ ಹಣ ಹಾಕಿದರು ಎಂದು ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಎನ್.ಹೆಚ್.ಕೋನರೆಡ್ಡಿ ಪ್ರಶ್ನೆ ಮಾಡಿದರು. ಈ ವೇಳೆ ಕೋನರೆಡ್ಡಿ ಮಾತಿಗೆ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read