ಕೊಪ್ಪಳ: ಬರ ಪರಿಹಾರ ಸಭೆಯಲ್ಲಿ ಸಚಿವ ಶಿವರಾಜ್ ತಂಗಡಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ.
ಸಭೆಗೆ ಗೈರಾಗಿದ್ದ ಕೊಪ್ಪಳ ಜಿಲ್ಲಾ ನಗರಾಭಿವೃದ್ಧಿ ಕಚೇರಿ ಇಇ ತ್ಯಾಗರಾಜ್ ಅವರಿಗೆ ಕರೆ ಮಾಡಿ ಸಚಿವರು ಕ್ಲಾಸ್ ತೆಗೆದುಕೊಂಡಿದ್ದಾರೆ. ಮೀಟಿಂಗ್ ಕರೆದಾಗಲೇ ಬಿಪಿ, ಶುಗರ್ ಹೆಚ್ಚಾಗುತ್ತಾ? ನಿನಗೊಬ್ಬನಿಗೆ ಬಿಪಿ, ಶುಗರ್ ಇರುವುದಾ? ಬರಗಾಲದ ಸಂದರ್ಭದಲ್ಲಿ ನೆಪ ಹೇಳಿ ರಜೆ ಹಾಕ್ತೀಯಾ? ಎಂದು ಪ್ರಶ್ನಿಸಿದ್ದಾರೆ.
ಸಸ್ಪೆಂಡ್ ಮಾಡಿ ಕಳುಹಿಸುತ್ತೇನೆ. ಆಗ ಬುದ್ಧಿ ಬರುತ್ತೆ. ಸರ್ಕಾರಿ ಕೆಲಸ ಮಾಡಲು ಬಂದಿದ್ದಿರಾ ಅಥವಾ ಏನಕ್ಕೆ ಬಂದಿದ್ದೀರಾ? ಮೀಟಿಂಗ್ ಕರೆದರೆ ಗೈರಾಗುವವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಗುಡುಗಿದ್ದಾರೆ.
ಇದೇ ವೇಳೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಎರಡು ವರ್ಷಗಳಿಂದ ಮೂರು ಟೆಂಡರ್ ಗಳನ್ನು ಫೈನಲ್ ಮಾಡ್ತಿಲ್ಲ. ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವೆ ಎಂದು ಎಚ್ಚರಿಕೆ ನೀಡಿದ್ದಾರೆ.