ಕೊಲಾರ: ರಾಜ್ಯಾದ್ಯಂತ ಗಣೇಶೋತ್ಸವ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿಯೂ ಗಣೇಶ ಹಬ್ಬ ಕಳೆಕಟ್ಟಿದೆ. ಆದರೆ ಜಿಲ್ಲೆಯಾದ್ಯಂತ ಡಿಜೆ ಸೌಂಡ್ ಬ್ಯಾನ್ ಮಾಡಲಾಗಿದೆ.
ಗಣೇಶೋತ್ಸವದ ಸಂದರ್ಭದಲ್ಲಿ ಕೋಲಾರ ಜಿಲ್ಲೆಯಾದ್ಯಂತ ಡಿಜೆ ಸೌಂಡ್ಸ್ ನಿಷೇಧಿಸಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಏಕಾಏಕಿ ಡಿಜೆ ಸೌಂಡ್ ನಿಷೇಧಿಸಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ. ಯಾವುದೇ ಮಾಹಿತಿ ನೀಡಿದೇ ಡಿಜೆ ಸೌಂಡ್ಸ್ ನಿಷೇಧ ಮಾಡಿರುವುದು ಅಪಾರ ನಷ್ಟವುಂಟು ಮಾಡುತ್ತಿದೆ ಎಂದು ಡಿಜೆ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಲಮಾಡಿ ಡಿಜೆ ಸಿಸ್ಟಮ್ ಗಳನ್ನು ತಂದಿದ್ದೇವೆ. ಈಗ ಇದ್ದಕ್ಕಿದ್ದಂತೆ ಡಿಜೆ ಸೌಂಡ್ ಬ್ಯಾನ್ ಮಾಡಲಾಗಿದೆ. ಇದರಿಂದ ಹಬ್ಬದ ಸಂದರ್ಭದಲ್ಲಿ ಹೊಟ್ಟೆಪಾಡಿಗೂ ತೊಂದರೆಯಾಗುತ್ತಿದೆ. ಕೊನೆಪಕ್ಷ ನಿಭಂದನೆಗಳನ್ನು ಹಾಕಿ ಅನುಮತಿ ಕೊಡಿ ಎಂದು ಒತ್ತಾಯಿಸಿದ್ದಾರೆ.